ಉಳ್ಳಾಲ: ಎಸ್‍ಡಿಪಿಐ ಪಕ್ಷದ ಕಚೇರಿ, ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ

ಉಳ್ಳಾಲ. ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಳಾಂತರಿತ ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರ ಉದ್ಘಾಟನೆಗೊಂಡಿತು.ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.ಎಸ್ ಡಿಪಿಐ ದ.ಕ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಕಚೇರಿಯನ್ನು ಉದ್ಘಾಟಿಸಿದರು.ಎಸ್ ಡಿಪಿಐ ರಾಜ್ಯ ಪ್ರ.ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ದಿಕ್ಸೂಚಿ ಭಾಷಣಗೈದರು.
ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲು, ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಲಾಯಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಸನ್ಮಾನಿಸಲಾಯಿತು.
ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಸುಹೈಲ್ ಉಳ್ಳಾಲ್ ಪ್ರಾಸ್ತವಿಕ ಮಾತುಗಳನ್ನಾಡಿದರು.ರಾಜ್ಯ ಸಮಿತಿ ಸದಸ್ಯ ಅಥಾವುಲ್ಲ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ.ಸಿ, ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ, ಎಸ್ ಡಿಪಿಐ ಮುಖಂಡ ಅಕ್ರಂ ಹಸನ್, ಉಳ್ಳಾಲ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಝರೀನ ರವೂಫ್, ಪಿಎಫ್ ಐ ಉಳ್ಳಾಲ ವಲಯಾಧ್ಯಕ್ಷ ಶಾಹಿದ್ ಕಿನ್ಯ, ಉಳ್ಳಾಲ ನಗರ ಸಭೆ ಸದಸ್ಯರಾದ ರಮೀಝ್, ಆಸ್ಗರ್ ಅಲಿ, ಶಹನಾಝ್ ಅಕ್ರಂ ಹಸನ್, ಖೈರುನ್ನೀಸ ನಿಝಾಮ್, ರುಖಿಯಾ ಇಕ್ಬಾಲ್, ಜಿಲ್ಲಾ ಸಮಿತಿ ಸದಸ್ಯ ಝಾಕೀರ್ ಉಳ್ಳಾಲ್. ಅಬ್ಬಾಸ್ ಎ.ಆರ್ . ಕ್ಷೇತ್ರ ಕಾರ್ಯದರ್ಶಿ ಝಹೀದ್ ಮಲಾರ್ ಉಪಸ್ಥಿತರಿದರು.

Related Posts

Leave a Reply

Your email address will not be published.