ಎಲ್ಲೂರು ಪೆಜತಕಟ್ಟೆ ಬಳಿ ಕಾರು ಅಪಘಾತ, ಒರ್ವ ಮೃತ್ಯು

ಕಾರು ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಸಮೀಪದ ಪೆಜತಕಟ್ಟೆ ಎಂಬಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ. 

ಕಟಪಾಡಿ ಪಳ್ಳಿಗುಡ್ಡೆ ನಿವಾಸಿ ರವೀಂದ್ರ ಪೂಜಾರಿ(37) ಮೃತಪಟ್ಟವರಾಗಿದ್ದು,ಇವರು ಭಾನುವಾರ ರಾತ್ರಿ ಎಲ್ಲೂರಿನಲ್ಲಿರುವ ಸ್ನೇಹಿತ ಮನೆಗೆ ಹೋಗಿ ಹಿಂತಿರುಗಿ ಬರುತ್ತಿರುವ ವೇಳೆ ಮಣ್ಣಿನ ರಸ್ತೆಗಿಳಿದ ಕಾರು ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.ಘಟನೆ ತಡರಾತ್ರಿ ಸಂಭವಿಸಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಪಡುಬಿದ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಮೃತರು ಕಟಪಾಡಿಯ ಕೊರಂಗ್ರಪಾಡಿ ಕ್ರಾಸ್ ಗ್ಯಾರೇಜ್ ನಡೆಸುತ್ತಿದ್ದರು ಎನ್ನಲಾಗಿದ್ದು, ಪತ್ನಿ ಇಬ್ಬರು ಮಕ್ಕಳು ಮತ್ತು ಕುಟುಂಬವನ್ನು ಅಗಲಿದ್ದಾರೆ.

Related Posts

Leave a Reply

Your email address will not be published.