ಕಬಕ ಪ್ರಕರಣ: ಮೂಲ್ಕಿ-ಮೂಡುಬಿದಿರೆ ಬಿಜೆಪಿ ಖಂಡನೆ
ಮೂಡುಬಿದಿರೆ: ಪುತ್ತೂರಿನ ಕಬಕದಲ್ಲಿ ನಡೆದ ಪ್ರಕರಣವನ್ನು ಮೂಲ್ಕಿ ಮೂಡುಬಿದಿರೆ ಮಂಡಲ ಬಿಜೆಪಿ ಖಂಡಿಸಿದೆ. ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಸಾವರ್ಕರ್ ಬಗ್ಗೆ ವಿವಾದ ಎಬ್ಬಿಸಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗ ಸಂಘಟನೆಗಳ ನಿಷೇಧಕ್ಕಾಗಿ ಮತ್ತು ಕಬಕ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಗೃಹ ಸಚಿವರನ್ನು ಒತ್ತಾಯಿಸುತ್ತೇನೆ. ಟಿಪ್ಪು ಸುಲ್ತಾನ್ ನೈಜ್ಯ ಸ್ವಾತಂತ್ರ್ಯ ಹೋರಾಟಗಾರನಲ್ಲ. ಬದಲಾಗಿ ಅಧಿಕಾರಿ ಶಾಹಿಗಳಿಗಾಗಿ ಹೋರಾಡಿದವನು. ಟಿಪ್ಪು ಮಂಗಳೂರು ಸೇರಿದಂತೆ ರಾಜ್ಯಕ್ಕೆ ದ್ರೋಹ ಬಗೆದಿರುವುದರಿಂದ ಟಿಪ್ಪು ಸುಲ್ತಾನ್ನನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸಣ್ಣಪುಟ್ಟ ಘಟನೆಗಳ ಮೂಲಕ ವ್ಯವಸ್ಥಿತ ಪಿತೂರಿ ಮಾಡುವ ಪ್ರಯತ್ನ ಕಬಕದಲ್ಲಿ ನಡೆದಿದೆ. ಕಬಕ ಗ್ರಾ.ಪಂ ನಿರ್ಣಯದ ಪ್ರಕರಣವೇ ಯಾತ್ರೆ ನಡೆದಿದ್ದು, ಅದರ ಮಧ್ಯೆ ಯಾತ್ರೆ ನಿಲ್ಲಿಸುವುದು ಸರಿಯಾದ ಕ್ರಮ ಅಲ್ಲ. ಪ್ರಕರಣದ ಹಿಂದಿರುವ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಜೈಲಿಗಟ್ಟುವಂತೆ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರಾ, ಗೋಪಾಲ ಶೆಟ್ಟಿಗಾರ್, ಉಪಾಧ್ಯಕ್ಷ ಲಕ್ಷ್ಮಣ್ ಪೂಜಾರಿ, ಕಾಯದರ್ಶಿ ಕಿಶೋರ್ ಕುಮಾರ್, ಜಯಾನಂದ ಮೂಲ್ಕಿ, ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಶ್ವತ್ಥ್ ಪಣಪಿಲ ಮತ್ತಿತರರು ಉಪಸ್ಥಿತರಿದ್ದರು.