ಕರಾವಳಿ ರೆಡಿಮೆಡ್ ಮತ್ತು ಪೂಟ್ವೇರ್ ಡೀಲರ್ಸ್ನಿಂದ ಸಿಎಂ ಗೆ ಮನವಿ
ಕೊರೋನಾ ಸಾಂಕ್ರಮಿಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ, ಲಾಕ್ಡೌನ್ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಜವಳಿ ಮತ್ತು ಚಪ್ಪಲಿ ವ್ಯಾಪಾರಕ್ಕೂ ಸೀಮಿತ ಸಮಯಾವಕಾಶ ಒದಗಿಸಿ ಕೊಡಬೇಕು ಎಂದು ಕರಾವಳಿ ರೆಡಿಮೆಡ್ ಮತ್ತು ಪೂಟ್ವೇರ್ ಡೀಲರ್ಸ್ ಅಸೋಸಿಯೇಶನ್ ಮಂಗಳೂರು ಇವರಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷರಾದ ಸಂತೋಷ್ ಕಾಮತ್, ಕಾರ್ಯಕಾರಿಣಿ ಸದಸ್ಯರುಗಳಾದ ಸುಲೋಚನಾ ಭಟ್, ದಿನೇಶ್, ಕುಸುಮಾ ದೇವಾಡಿಗ, ಪ್ರಸಾದ್, ಸಯೀದ್ ಇಸ್ಮಾಯಿಲ್ ಉಪಸ್ಥಿತರಿದ್ದರು.