Header Ads
Breaking News

ಅಕಾಲಿಕ ಮಳೆಯಿಂದ ಸಂಕಷ್ಟದಲ್ಲಿ ಕಲ್ಲಂಗಡಿ ರೈತ

watermelon farm

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಗಿಳಿಯಾರು ಪರಿಸರದ ಯುವ ಕೃಷಿಕ ಭೋಜ ಪೂಜಾರಿ ತನ್ನ ಎರಡು ಎಕ್ಕರೆ ಪ್ರದೇಶದ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಶ್ರಮಕ್ಕೆ ತಕ್ಕಂತೆ ಕಲ್ಲಂಗಡಿಯೂ ಬೆಳೆಯು ಚೆನ್ನಾಗಿ ಬೆಳೆದಿದೆ. ಆದ್ರೆ ..ಲಾಭ ತಂದು ಕೊಡಬೇಕಾಗಿದ್ದ ಕಲ್ಲಂಗಡಿ ಹಣ್ಣಿನ ಕೃಷಿ ನಷ್ಟದ ಖಾತೆಗೆ ಸೇರಿಕೊಂಡಿದೆ.watermelon farm
ಪ್ರತಿ ವರ್ಷ ತನ್ನ ಕೃಷಿ ಭೂಮಿಯಲ್ಲಿ ಭತ್ತ, ಉದ್ದು, ಅವಡೆ ಹೀಗೆ ನಾನಾ ರೀತಿಯ ಬೆಳೆಯ ಜೊತೆ ಲಾಭದಾಯಕ ಕಲ್ಲಂಗಡಿ ಹಣ್ಣಿನ ಕೃಷಿಯನ್ನ ಭೋಜ ಪೂಜಾರಿ ಬೆಳೆಯುತ್ತಾರೆ. ಆದರೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸಿ ಭಾರೀ ನಷ್ಟ ಉಂಟಾಗಿದೆಕಳೆದ ವರ್ಷ ಹಳದಿ ಎಲೆ ರೋಗದಿಂದ ಕಂಗೆಟ್ಟಿದ್ದ ಭೋಜ ಪೂಜಾರಿ ಈ ವರ್ಷ ಅತಿ ಉತ್ಸಾಹದಿಂದ ಕಲ್ಲಂಗಡಿ ಕೃಷಿಗೆ ಇಳಿದಿದ್ರು, ಅದ್ರೆ ಈ ಬಾರಿಯೂ ಲಾಭದ ನಿರೀಕ್ಷೆ ಹುಸಿಯಾಗುವಂತೆ ಮಾಡಿದೆ.

ಕೊಯ್ಲಿಗೆ ಬರುವ ಸಂಧರ್ಭದಲ್ಲಿ ಅಕಾಲಿಕ ಮಳೆ ಎಂಬುವುದು ಬೆಂಬಿಡದ ಭೂತದಂತೆ ಕಾಡಿದೆ. ಸಾಧಾರಣವಾಗಿ 20ರಿಂದ 25ಟನ್ ಬೆಳೆಯ ನೀರಿಕ್ಷೆಯೊಂದಿಗೆ ಕೊಯ್ಲಿಗಿಳಿದ ಭೋಜ ಪೂಜಾರಿ 10ಟನ್‍ಗಷ್ಟೆ ಸಂತುಷ್ಟರನ್ನಾಗಿಸಿದೆ.ಇನ್ನುಳಿದ ಕಾಯಿಗಳ ಕೊಯುಷ್ಟುರಲ್ಲಿ ಮಳೆ ರೌದ್ರ ನರ್ತನ ಕಲ್ಲಂಗಡಿಯ ಮೇಲೆ ಬೀರಿ, ಹುಳಗಳ ಭಾಧೆಯೊಂದಿಗೆ ಸುಮಾರು 15 ಟನ್ ಕೊಳೆಯುವಂತೆ ಮಾಡಿದೆ.watermelon farm
ಲಾಕ್ ಡೌನ್ ಬಿಸಿ ಒಂದೆಡೆಯಾದರೆ ಇತ್ತ ಅಕಾಲಿಕ ಮಳೆಯ ರೌದ್ರ ನೃತನ ರೈತನನ್ನು ಮಂಕಾಗಿಸಿದೆ.ತಾನು ನಿರೀಕ್ಷೆಯಲ್ಲಿದ್ದ ಲಾಭದ ಖಾತೆಯನ್ನು ಅಕಾಲಿಕ ಮಳೆ ನುಂಗಿಬಿಟ್ಟಿತು.ಒಳ್ಳೆಯ ದರ ಈ ಬಾರಿ ಸಿಗಬಹುದೇನೋ ಎಂಬ ನಿರೀಕ್ಷಯೊಂದಿಗೆ ಕಾಯಕಕ್ಕೆ ಇಳಿದ ಭೋಜ ಪೂಜಾರಿಗೆ ಲಾಕ ಡೌನ್, ಅಕಾಲಿಕ ಮಳೆ, ಭಾರೀ ನಷ್ಟವುಂಟು ಮಾಡಿದೆ. ಸದ್ಯ ಸಾಲದ ಸುಳಿಯಲ್ಲಿ ಸಿಲುಕಿರುವ ರೈತನಿಗೆ ಸರಕಾರದ ಸಹಾಯ ಹಸ್ತ ಬೇಕಾಗಿದೆ.

Related posts

Leave a Reply

Your email address will not be published. Required fields are marked *