Header Ads
Breaking News

ಅಥಣಿ ತಾಲೂಕಿನಲ್ಲಿ ಕೊರೊನಾ ಸೋಂಕು ಇಳಿಕೆ : ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ

Mahesh Kumatalli, MLA of Athani

ಅಥಣಿ ತಾಲೂಕಿನಲ್ಲಿ 50% ಕೊರೋಣ ಹರಡುವಿಕೆ ಇಳಿಕೆಯಾಗಿದೆ. ಜೂನ್ 15 ರ ತನಕ ಇನ್ನಷ್ಟು ಕೊರೊನಾ ಪ್ರಮಾಣ ಇಳಿಕೆಯಾಗಬಹುದು ಜನರು ಜಾಗೃತರಾಗಿ ಕೆಮ್ಮು ಜ್ವರ ನೆಗಡಿ ಇಂತಹ ಕಾಯಿಲೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ಕರ್ನಾಟಕ ಕೊಳಗೇರಿ ಮಂಡಳಿ ಅಧ್ಯಕ್ಷರು ಹಾಗೂ ಅಥಣಿ ಮತಕ್ಷೇತ್ರದ ಶಾಸಕರಾದ ಮಹೇಶ ಕುಮಟಳ್ಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊರೋಣ ಪ್ರಮಾಣ ಕಡಿಮೆ ಆಯ್ತು ಅನ್ನುವಷ್ಟರಲ್ಲಿ ಬ್ಲಾಕ್ ಮತ್ತು ವೈಟ್ ಪಂಗಸ್ ಹುಟ್ಟುಕೊಂಡಿದೆ ಈ ಫಂಗಸ್ ಗಳು ಜನರಿಂದ ಜನರಿಗೆ ಹರಡುವ ವೈರಸ್ ಅಲ್ಲಾ ಕೊರೋಣದಿಂದ ಗುಣಮುಖರಾದ ರೋಗಿಗಳಿಗೆ ಮಾತ್ರ ಹುಟ್ಟಿಕೊಳ್ಳುವ ಸಾಧ್ಯವಿರುತ್ತವೆ. ಮನುಷ್ಯನ ದೇಹದಲ್ಲಿ ಯಾವುದೇ ರೀತಿ ತೊಂದರೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರಿಗೆ ಭೇಟಿಯಾಗಿ ಚಿಕಿತ್ಸೆ ಪಡೆಯಿರಿ ಕಡ್ಡಾಯವಾಗಿ ಎಲ್ಲರೂ ಸರ್ಕಾರದ ನಿಯಮವನ್ನು ಪಾಲಿಸಿ ಅಂತರ ಕಾಯ್ದುಕೊಳ್ಳಿ ಮಾಸ್ಕ ಧರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ ಬಂಗಾರಪ್ಪನವರ ಮಾತನಾಡಿ, ತಾಲೂಕು ಆಡಳಿತ ವತಿಯಿಂದ ನಾವು ಟಾಸ್ಕಪೆÇೀರ್ಸ ಕಮಿಟಿ ಮಾಡಿದ್ದೇವೆ ಆ ಕಮಿಟಿ ಮೂಲಕ ಸುಮಾರು 20ದಿನಗಳಿಂದ ತಾಲೂಕಿನಾದ್ಯಂತ ಹೋಂ ಐಶು ಲೇಶನ್ ಇದ್ದಂತೆ ರೋಗಿಗಳನ್ನು ದಿನಾಲು ಫೆÇೀನ್ ಮೂಲಕ ಸಂಪರ್ಕಿಸುವ ಜೊತೆಗೆ ಅವರಿಗೆ ಅಗತ್ಯ ಇರುವ ಟ್ಯಾಬ್ಲೆಟ್ ಗಳನ್ನು ಕಳುಹಿಸುವುದರ ಮೂಲಕ ದಿನಾಲು ಅವರ ಸಂಪರ್ಕದಲ್ಲಿರುತ್ತವೆ ಎಂದು ಹೇಳಿದರು.Mahesh Kumatalli, MLA of Athani

ಅಥಣಿ ಪುರಸಭೆ ಮುಖ್ಯ ಅಧಿಕಾರಿಗಳಾದ ಮಹಾಂತೇಶ ಕವಲಾಪೂರ ಮಾತನಾಡಿ, ಅಥಣಿ ಪಟ್ಟಣದಲ್ಲಿ ಬರುವ ಕೊರೋಣ ಪಾಸಿಟಿವ್ ಇಂದ ಹೋಮ ಐಸೋಲೇಶನ್ ದಲ್ಲಿರುವ ಕಸವನ್ನು ಕೂಡ ಪ್ರತ್ಯೇಕವಾಗಿ ವಿಲೇವಾರಿ ಮಾಡುವುದರ ಜೋತೆಗೆ ಮನೆಯ ಸುತ್ತಮುತ್ತಲು ವಾಡದಲ್ಲಿ ಕೂಡ ಸ್ಯಾನಿಟೈಸರ್ ಮಾಡುತ್ತಿದ್ದೇವೆ ಎಂದರು.

ಇದೆ ಸಮಯದಲ್ಲಿ ಅಥಣಿ ತಹಶಿಲ್ದಾರ ದುಂಡಪ್ಪಾ ಕೋಮಾರ, ಡಿವೈಎಸ್ಪಿ ಎಸ್ ವ್ಹಿ ಗಿರೀಶ, ಸಿಪಿಐ ಶಂಕರಗೌಡ ಬಸಗೌಡರ, ಪಿಎಸ್‍ಐ ಕುಮಾರ ಹಡಕರ , ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *