Header Ads
Breaking News

ಅಪಘಾತ‌ ಸ್ಥಳದಲ್ಲಿದರೂ ಸ್ಪಂದಿಸದ ಶಾಸಕ !!

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಕೋವಿಡ್ ಕರ್ತವ್ಯ ಮುಗಿಸಿ ವಾಪಾಸ್ಸಾಗುತ್ತಿದ್ದಾಗ ಹಿರಿಯ ಆರೋಗ್ಯ ಅಧಿಕಾರಿಯೋರ್ವರಿಗೆ ಅಪಘಾತವಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಟ ನಡೆಸಿದ್ದರೂ ಅದೇ ದಾರಿಯಲ್ಲಿ ತೆರಳುತ್ತಿದ್ದ ತರೀಕೆರೆ ಶಾಸಕರೊಬ್ಬರು ಕಾರಿನಿಂದ ಕೆಳಗೆ ಇಳಿಯದೇ ಸಹಾಯಕ್ಕೆ ಮುಂದಾಗದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದ್ದು, ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಈ ರಸ್ತೆಯಾಗಿ ಸಾಗುತ್ತಿದ್ದರು. ಆರೋಗ್ಯಾಧಿಕಾರಿ ಡಾ. ರಮೇಶ್ ಕುಮಾರ್ ಅವರಿಗೆ ಅಪಘಾತವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಕಾರಿನಿಂದ ಇಳಿದು ಸಹಾಯಕ್ಕೆ ಬಾರದ ಶಾಸಕರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Related posts

Leave a Reply

Your email address will not be published. Required fields are marked *