Header Ads
Breaking News

ಅಪ್ರಾಪ್ತ ಬಾಲಕಿಯರ ಅತ್ಯಾಚಾರ, ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿ ಗಲ್ಲಿಗೇರಿಸುವಂತೆ ಪ್ರತಿಭಟನೆ

ಕುದುರಸಾಲೋಡಗಿ ಗ್ರಾಮದ ರೇಣುಕಾ ಹಾಗೂ ಪ್ರೀತಿ ಎಂಬ ಅಪ್ರಾಪ್ತ ಬಾಲಕಿಯರನ್ನು ದುಷ್ಕರ್ಮಿಯರು ಅತ್ಯಾಚಾರ ವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸಾಮೂಹಿಕ ಗಲ್ಲಿಗೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘ ಸಮಿತಿ (ಸಾಗರಬಣ ) ಪ್ರತಿಭಟನೆ ನಡೆಸಿದರು  ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ತಹಸಿಲ್ದಾರ್ ಕಚೇರಿ ಆವಣದಲ್ಲಿ ಕರ್ನಾಟಕ ದಲಿತ ಸಂಘ ಸಮಿತಿ ಕುದುರಸಾಲೋಡಗಿ ಗ್ರಾಮದ ರೇಣುಕಾ ಹಾಗೂ ಪ್ರೀತಿ ಎಂಬ ಅಪ್ರಾಪ್ತ ಬಾಲಕಿಯರನ್ನು ದುಷ್ಕರ್ಮಿಯರು ಅತ್ಯಾಚಾರ ವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕೆಂದು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಿದ್ಯಾರ್ಥಿ ಘಟಕದ ಸಂಚಾಲಕ ವೈಸಿ ಮಯೂರ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಕೊಲೆ-ಸುಲಿಗೆ ದಬ್ಬಾಳಿಕೆ ಸಾಮೂಹಿಕ ಬಹಿಷ್ಕಾರ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ಹೆಚ್ಚುತ್ತಿರುವುದನ್ನು ನೋಡಿದರೆ ಸಂವಿಧಾನ ಬದ್ಧ ಮೂಲಭೂತ ಹಕ್ಕುಗಳು ಸಂಪೂರ್ಣವಾಗಿ ಮೊಟಕುಗೊಂಡಿವೆ ಎನ್ನುವುದು ಸಾಬೀತುಪಡಿದಂತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೀಲಕಂಠ ಹೊಸಮನಿ, ಶರಣು ಚಲವಾದಿ, ಜೈಭಿಮ ತಳಕೇರಿ, ಪ್ರವೀಣ ಆಲಹಳ್ಳಿ ಮತ್ತಿತರರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

 

Related posts

Leave a Reply

Your email address will not be published. Required fields are marked *