Header Ads
Breaking News

ಅವ್ಯವಸ್ಥೆಯ ಆಗರದಲ್ಲಿದ್ದ ಕಾರ್ಕಳ ರಂಗಮಂದಿರಕ್ಕೆ ಕಾಯಕಲ್ಪ : ವಿ4 ನ್ಯೂಸ್ ವರದಿಗೆ ಎಚ್ಚೆತ್ತ ಕಾರ್ಕಳ ಪುರಸಭೆ

ಕಾರ್ಕಳದಲ್ಲಿ ಗಾಂಧಿ ಮೈದಾನದ ರಂಗ ಮಂದಿರ ಅವ್ಯವಸ್ಥೆಗೆ ಆಗದಿಂದ ಕೂಡಿತ್ತು. ಈ ಬಗ್ಗೆ ವಿ4 ನ್ಯೂಸ್‍ನಲ್ಲಿ ಸಮಗ್ರ ವರದಿಯನ್ನು ಬಿತ್ತರಿಸಲಾಗಿತ್ತು.
: ಕಾರ್ಕಳದಲ್ಲಿ ಗಾಂಧಿ ಮೈದಾನದ ರಂಗ ಮಂದಿರ ಅವ್ಯವಸ್ಥೆಗೆ ಆಗದಿಂದ ಕೂಡಿತ್ತು. ಈ ಬಗ್ಗೆ ವಿ4 ನ್ಯೂಸ್‍ನಲ್ಲಿ ಸಮಗ್ರ ವರದಿಯನ್ನು ಬಿತ್ತರಿಸಲಾಗಿತ್ತು. ಇದೀಗ ವರದಿಗೆ ಎಚ್ಚೆತ್ತುಕೊಂಡ ಪುರಸಭಾ ಅಧಿಕಾರಿಗಳು ರಂಗಮಂಟಪಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಆರಂಭಿಸಿದ್ದು, ಸ್ವಚ್ಚತಾ ಕಾರ್ಯವನ್ನು ಕೂಡಾ ಕೈಗೊಂಡಿದ್ದಾರೆ.
ಕಾರ್ಕಳ ಪುರಸಭೆ 18 ನೇ ವಾರ್ಡಿನ ಗಾಂಧಿ ಮೈದಾನದ ರಂಗಮಂದಿರದ ಅವ್ಯಸ್ಥೆಯ ಬಗ್ಗೆ ಏ.4ರಂದು ವಿ4 ನ್ಯೂಸ್ ವಾಹಿನಿಯಲ್ಲಿ ಸವಿಸ್ತಾರವಾಗಿ ವರದಿ ಪ್ರಸಾರವಾಗಿತ್ತು. ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆ, ಸ್ಥಳೀಯ ದಾನಿಗಳ ಸಹಾಯದಿಂದ ರಂಗಮಂಟಪಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಕೈಗೊಂಡಿದೆ. ಅದಲ್ಲದೆ ಕೆಟ್ಟುಹೋದ ನೀರಿನ ನಲ್ಲಿಗಳನ್ನು, ರಸ್ತೆಗಳನ್ನು ಸರಿಪಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧಿಕಾರಿಗೆ ರೇಖಾ ಜೆ ಶೆಟ್ಟಿ ಯವರು ಪುರಸಭೆಯಲ್ಲಿ ಅನುದಾನದ ಕೊರತೆ ಇದ್ದು ಸ್ಥಳೀಯ ದಾನಿಗಳಿಂದ ನೆರವು ಪಡೆದು ರಂಗಮಂದಿರದ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಸದಸ್ಯ ಹಾಗೂ ಉಪಾಧ್ಯಕ್ಷರಾದ ಪಲ್ಲವಿ ಅವರು ಮಾತನಾಡಿ ನಾನು ಈ ಸಂದರ್ಭದಲ್ಲಿ ವಿ4 ಚಾನೆಲ್ ಗೆ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಈ ರಂಗಮಂದಿರ ಸಮಸ್ಯೆಯ ಮೇಲೆ ಬೆಳಕನ್ನು ಹರಿಸಿ ಸಮಸ್ಯೆಯನ್ನು ದೂರ ಮಾಡಿದೆ ಎಂದು ಹೇಳಿದರು.ನಂತರ ಮಾತನಾಡಿದ ಪುರಸಭೆ ಸಪಾಯಿ ಸಿಬ್ಬಂದಿ ಕಲಾಮಂದಿರ ಹಾಗು ಮೈದಾನದ ಶುಚಿತ್ವದ ಬಗ್ಗೆ ಪುರಸಭೆ ಯನ್ನು ಅವಲಂಬಿಸದೆ. ಸಂಘ-ಸಂಸ್ಥೆಯವರು ಹಾಗೂಆಯೋಜಕರು ಜವಾಬ್ದಾರಿ ಕೊಳ್ಳಬೇಕೆಂದು ಹೇಳಿದರು.ಒಟ್ಟಿನಲ್ಲಿ ಅಂತೂ ಸ್ಥಳೀಯ ದಾನಿಗಳ ಸಹಾಯದಿಂದ ರಂಗಮಂಟಪದ ಸುಣ್ಣ ಬಣ್ಣ ಬಳಿಯುವ ಕೆಲಸ ನಡೆದಿದ್ದು, ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಲಿ ಅನ್ನೋದೇ ನಮ್ಮ ಆಶಯ..
ಇದೀಗ ವರದಿಗೆ ಎಚ್ಚೆತ್ತುಕೊಂಡ ಪುರಸಭಾ ಅಧಿಕಾರಿಗಳು ರಂಗಮಂಟಪಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಆರಂಭಿಸಿದ್ದು, ಸ್ವಚ್ಚತಾ ಕಾರ್ಯವನ್ನು ಕೂಡಾ ಕೈಗೊಂಡಿದ್ದಾರೆ.

Related posts

Leave a Reply

Your email address will not be published. Required fields are marked *