Header Ads
Breaking News

ಅಶಕ್ತರಿಗೆ ಊಟ ವಿತರಿಸಿದ ಶಾಸಕರು

Help India Foundation Ullala

ಹೆಲ್ಪ್ ಇಂಡಿಯಾ ಫೌಂಡೇಷನ್ ಉಳ್ಳಾಲ ಇತರೆ ಸಾಮಾಜಿಕ ಕಾರ್ಯಗಳ ಜೊತೆಗೆ ಲಾಕ್ ಡೌನ್ ಸಂದರ್ಭ ರಸ್ತೆಬದಿಯಲ್ಲಿರುವ ಮಂದಿಗೆ ಹಸಿವು ಮುಕ್ತ ಮಾಡುವ ಕಾರ್ಯ ನಡೆಸುತ್ತಿರುವುದು ಮಾನವೀಯತೆಯ ಕಾರ್ಯ ಹಾಗೂ ಇತರರಿಗೆ ಮಾದರಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

 Help India Foundation ullalaತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕರಿಗೆ, ರಸ್ತೆಬದಿಯಲ್ಲಿರುವ ಮಂದಿಗೆ ಊಟ ವಿತರಿಸಿ ಮಾತನಾಡಿದರು. ಸಂದಿಗ್ಧ ಸ್ಥಿತಿಯಲ್ಲಿ ಅಶಕ್ತರಿಗೆ ಸಹಕರಿಸುವ ಕಾರ್ಯ ಎಲ್ಲರಿಂದ ಆಗಬೇಕಿದೆ. ಎಲ್ಲರೂ ತಮ್ಮಿಂದ ಆಗುವಷ್ಟು ಸಹಕಾರವನ್ನು ಅಶಕ್ತರಿಗೆ ಮಾಡಿ. ಇದಕ್ಕೆ ಹೆಲ್ಪ್ ಇಂಡಿಯಾ ಫೌಂಡೇಷನ್ ಮಾದರಿ ಎಂದರು.
ಈ ವೇಳೆ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಹೆಲ್ಪ್ ಇಂಡಿಯಾ ಫೌಂಡೇಚನ್‍ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಸದಸ್ಯ ಝಾಕಿರ್ ಇಕ್ಲಾಸ್ , ಝಕರಿಯಾ ಮಲಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *