Header Ads
Breaking News

ಆಗುಂಬೆ ಘಾಟಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆತ : ಜನ ಪರಿಸರ ಪ್ರೇಮಿ ಮಿಥುನ್ ಶೆಟ್ಟಿಯಿಂದ ತರಾಟೆ

ಲಾಕ್ ಡೌನ್ ಹಿನ್ನಲೆ ಗೂಳೆ ಹೊರಟ ಕೆಲವೊಂದು ಜನ ಅಗುಂಬೆಯಲ್ಲಿ ಘಾಟಿ ಯ ಪ್ರದೇಶದಲ್ಲಿ ತಮ್ಮ ಮನೆಗಳ ಪ್ಲಾಸ್ಟಿಕ್ ಕಸಗಳನ್ನು ಸುರಿದು ಹೋಗುತ್ತಿರುವುದು ಕಂಡು ಬಂದಿದೆ.

ಈ ಬಗ್ಗೆ ಹೆಬ್ರಿ ಪರಿಸರ ಪ್ರೇಮಿ ಮಿಥುನ್ ಶೆಟ್ಟಿಯವರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ, ಸ್ಥಳಕ್ಕೆ ತೆರಳಿ ಕಸ ಎಸೆಯುತ್ತಿದ್ದ ಸ್ಥಳೀಯರಿಗೆ ಪರಿಸರ ಹಾಗೂ ಸ್ವಚ್ಚತೆ ಪಾಠ ಮಾಡಿದರು. ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿದ್ದು, ಜನ ಹಾಕಿದ ತ್ಯಾಜ್ಯಗಳನ್ನು ತಿಂದಲ್ಲಿ ಅವುಗಳ ಅರೋಗ್ಯಕ್ಕೂ ಹಾನಿಯಾಗುವುದರ ಜೊತೆಗೆ ಸ್ವಚ್ಚಂದ ಪರಿಸರವೂ ಹಾಳಾಗುತ್ತವೆ.

ಹೀಗಾಗಿ ಕಸ ತಂದಿದ್ದವರು ತಮ್ಮ ಕಸವನ್ನು ವಾಪಸ್ ಕೊಂಡು ಹೋಗುವಂತೆ ಮನವರಿಕೆ ಮಾಡಿದರು. ಬಳಿಕ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

 

Related posts

Leave a Reply

Your email address will not be published. Required fields are marked *