Header Ads
Breaking News

ಆರ್ಥಿಕವಾಗಿ ರಾಜ್ಯ ಸರ್ಕಾರ ಕುಸಿದು ಹೋಗಿದೆ : ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಿಡಿ

ಸದ್ಯ ಕೊರೊನಾ ಸುನಾಮಿ ರೀತಿಯಲ್ಲಿ ದೇಶವನ್ನು ಕಾಡುತ್ತಿದೆ. ಆರ್ಥಿಕವಾಗಿ ರಾಜ್ಯ ಕುಸಿದು ಹೋಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಿಡಿಕಾರಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವತ್ತು ಈ ಕೊರೊನಾ ಸುನಾಮಿ ರೀತಿಯಲ್ಲಿ ಕಾಡಲಿದೆ ಎಂದು ಎಚ್ಚರಿಕೆ ನೀಡಿದ್ದರು. ಆದ್ರೆ ಅವತ್ತು ಬಿಜೆಪಿ ನಾಯಕರು ಅದನ್ನು ಲಘುವಾಗಿ ತೆಗೆದುಕೊಂಡಿದ್ದರು. ಇದೀಗ ರಾಹುಲ್ ಗಾಂಧಿ ಮಾತು ನಿಜವಾಗಿದೆ ಅಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಿದ್ರೆ ಜನರು ಬೀದಿಗೆ ಬರುತ್ತಿರಲಿಲ್ಲ. ಮನೆಮನೆಗೆ ಆಹಾರದ ಕಿಟ್ಟನ್ನು ಕೊಡುತ್ತಿದ್ದೇವು. ಕಾಂಗ್ರೆಸ್ ಇದ್ದಿದ್ದರೆ ಪರಿಸ್ಥಿತಿ ಕಂಟ್ರೋಲ್ ಗೆ ಬರುತ್ತಿತ್ತು. ಈ ಸರ್ಕಾರ ಜಿಎಸ್ಟಿ, ನೋಟ್ ಬ್ಯಾನ್ ಮಾಡಿ ಕರಾಳ ದಿನಗಳನ್ನು ಸೃಷ್ಟಿ ಮಾಡಿತು. ಮಧ್ಯರಾತ್ರಿ ನೋಟ್ ಬ್ಯಾನ್‍ಮಾಡಿದವರು ಅದ್ಯಾಕೆ ಪರಿಹಾರ ಪ್ಯಾಕೇಜ್ ಕೊಡಕ್ಕಾಗಲ್ಲ ಎಂದು ಪ್ರಶ್ನೆ ಮಾಡಿದರು. ಇನ್ನು ವಾಹನ ಸೀಝ್ ಎಂದು ಬೇಕಾಬಿಟ್ಟಿ ದಂಡ ವಿಧಿಸಿ ಜನರನ್ನು ಇನ್ನಷ್ಟು ಪಾತಾಳಕ್ಕೆ ದೂಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ವಿರುದ್ಧ ಮಾತನಾಡಿದ್ರೆ ಕೇಸ್ ಹಾಕ್ತೀರಿ. ಇದು ಪ್ರಜಾಪ್ರಭುತ್ವ ಸರ್ಕಾರ ಅಲ್ವಾ ಎಂದ ಅವ್ರು ಪರಿಸ್ಥಿತಿ ಇನ್ನಷ್ಟು ಉಲ್ಬಣವಾಗಲಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲಂದ್ರೆ ರಾಜೀನಾಮೆ ಕೊಡಲಿ ಎಂದು ಸವಾಲೆಸೆದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಯುಟಿ ಖಾದರ್, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದೀನ್ ಬಾವಾ, ಜೆ.ಆರ್.ಲೋಬೋ, ಯುವ ಮುಖಂಡ ಮಿಥುನ್ ರೈ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *