Header Ads
Breaking News

ಇನ್ನೂ ಮೇಲೇಳದ ಟಗ್.. ಕಾರ್ಯಚರಣೆ ವಿಫಲ.. ನಾಪತ್ತೆಯಾದ ಮೂವರ ಮಾಹಿತಿ ಇನ್ನೂ ನಿಗೂಢ

ಕೆಲ ದಿನಗಳ ಹಿಂದೆ ಚಂಡಮಾರುತಕ್ಕೆ ಸಿಲುಕಿ ಅಪಘಾತಕ್ಕೀಢಾದ ಮಂಗಳೂರು ಮೂಲದ ಟಗ್ ಪಡುಬಿದ್ರಿ ಕಡಲ ತೀರದಲ್ಲಿ ಪತ್ತೆಯಾಗಿದ್ದರೂ ಅದನ್ನು ಸುಸ್ಥಿತಿಗೆ ತರುವ ಕಾರ್ಯಚರಣೆ ಇಂದು ಕೂಡಾ ವಿಫಲವಾಗಿದೆ.   ಈ ದಿನ ವಿಳಂಬವಾಗಿ ಕಾರ್ಯಚರಣೆ ಆರಂಭಗೊಂಡಿದ್ದು, ಅಷ್ಟರಲ್ಲಿ ಮತ್ತೆ ಮಳೆ ಆರಂಭಗೊಂಡಿದ್ದರಿಂದ ಕಾರ್ಯಚರಣೆಗೆ ಹಿನ್ನಡೆಯಾಗಿದ್ದು ಒಂದು ಕಡೆಯಾದರೆ, ಬಂಡೆ ಕಲ್ಲುಗಳಿರುವ ಪ್ರದೇಶದಲ್ಲಿ ಈ ಟಗ್ ಪಲ್ಟಿಯಾಗಿ ಬಿದ್ದಿರುವುದರಿಂದ ಕಾಯಾಚರಣೆ ಮತ್ತಷ್ಟು ಕಠಿಣವಾಗುತ್ತಿದೆ. ಟಗ್ ನಲ್ಲಿದ್ದ ಮೂವರು ಏನಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ, ಆ ಪಲ್ಟಿ ಬಿದ್ದ ಟಗ್ ನಲ್ಲೇ ಅವರು ಸಿಲುಕಿಕೊಂಡಿರ ಬಹುದೆಂಬ ಸಂಶಯವಿದ್ದು, ಅದನ್ನು ನೋಡಲು ಬಹಳಷ್ಡು ಮಂದಿ ಕಡಲತೀರದಲ್ಲಿ ಸೇರಿದ್ದು, ಮಧ್ಯಾಹ್ನವಾಗುತ್ತಿದಂತೆ ಕಡಲ ನೀರು ಉಬ್ಬರವಾಗುತ್ತಿದ್ದರಿಂದ ಕಾರ್ಯಚರಣೆಗೆ ಅಡಚಣೆಯಾಗಿ ಸ್ಥಗಿತಗೊಳಿಸಿದ್ದರಿಂದ ಕೊರೊನಾ ಲಾಕ್ ಡೌನ್ ಮಧ್ಯೆಯೂ ಸ್ಥಳಕ್ಕೆ ಬಂದ ಜನರು ನಿರಾಶೆಗೊಂಡು ಮರಳಿದ್ದಾರೆ.

Related posts

Leave a Reply

Your email address will not be published. Required fields are marked *