Header Ads
Breaking News

ಇಫ್ತಾರ್ ತೊರೆಯಲು ಕಿಟ್ ವಿತರಣೆ

Dr. Abdul Shakeel Charitable Trust Kit Distribution

ಲಾಕ್‍ಡೌನ್ ಹಲವರಿಗೆ ಸಮಸ್ಯೆಯನ್ನು ತಂದೊಡ್ಡಿದೆ. ಆಸ್ಪತ್ರೆಯಲ್ಲಿರುವ ರೋಗಿಗಳು, ಅವರ ಜೊತೆಗಿರುವವರು ಮತ್ತೂ ಸಂಕಷ್ಟಕ್ಕೀಡಾಗಿದ್ದಾರೆ. ರಂಝಾನ್ ತಿಂಗಳಾಗಿರುವುದರಿಂದ ಇವರಿಗೆ ಇಫ್ತಾರ್ ಭೋಜನ ವ್ಯವಸ್ಥೆ ಗೊಳಿಸುವುದೇ ಸವಾಲಾಗಿದೆ. ಇದನ್ನು ಮನಗಂಡ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಇಫ್ತಾರ್ ತೊರೆಯಲು ಕಿಟ್ ವಿತರಿಸುತ್ತಿದೆ.

 Dr. Abdul Shakeel Charitable Trust Kit Distribution

ನಿರಂತರ ಸಮಾಜಮುಖಿ ಸೇವೆಯಲ್ಲಿ ಗುರುತಿಸಿಕೊಂಡಿರುವ ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಈಗ ಉಪವಾಸಿಗರಿಗೆ ಇಫ್ತಾರ್‍ಗೆ ವ್ಯವಸ್ಥೆ ಮಾಡುವ ಮೂಲಕ ನೆರವಾಗತೊಡಗಿದೆ. ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯಲ್ಲಿನ ರೋಗಿಗಳ ಜೊತೆಗಾರರರಿಗೆ ಇಫ್ತಾರ್ ಕಿಟ್ ಮತ್ತು ಭೋಜನ ದ ಕಿಟ್‍ಗಳನ್ನು ಪ್ರತೀ ದಿನ ವಿತರಿಸಲಾಗುತ್ತಿದೆ. ಇಫ್ತಾರ್ ಗೆ ಜ್ಯೂಸ್, ಹಣ್ಣು ಹಂಪಲು ಮತ್ತು ಭೋಜನಕ್ಕೆ ಬಿರಿಯಾನಿ ನೀಡಲಾಗುತ್ತದೆ. ಪ್ರತೀದಿನ 300ಕ್ಕೂ ಹೆಚ್ಚು ಮಂದಿ ಇದರ ಸದುಪಯೋಗ ಪಡೆಯುತ್ತಿದ್ದಾರೆ.

Related posts

Leave a Reply

Your email address will not be published. Required fields are marked *