Header Ads
Breaking News

ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿರಾಷ್ಟ್ರೀಯ ವೆಬ್- ವಿಚಾರಗೋಷ್ಟಿ

ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ‘ರಾಷ್ಟ್ರೀಯ ಶಿಕ್ಷಣ ನೀತಿ 2020: ಹಿಂದಿಭಾμÉಯ ಸಂಭವನೀಯತೆಗಳು’ ಎಂಬ ಒಂದು ದಿನದ ವೆಬ್ ವಿಚಾರಗೋಷ್ಟಿ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಮೈಥಿಲಿ ಅಧ್ಯಯನ ಕೇಂದ್ರದ ಸಹ ಸಮನ್ವಯಕಿ ಡಾ. ವಂದನಾ ಝಾ ಭಾಗವಹಿಸಿದ್ರು.


ವಿಶೇಷ ಉಪನ್ಯಾಸಕಿಯಾಗಿ ಚೆನ್ನೈಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ಸಂತೋಷಿ ಕುಮಾರಿ ಹಾಜರಿದ್ದರು. ಹಿಂದಿ ಭಾμÉಯ ಹಿರಿಯ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡಾದ ವಲಯ ಕಾರ್ಯಾಲಯಾಧಿಕಾರಿ ಮಾಯಾ ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಲಾ ವಿಭಾಗದ ಡೀನ್ ಡಾ.ಎ. ಜಯಕುಮಾರ್ ಶೆಟ್ಟಿ, ಎಸ್‍ಡಿಎಂ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ. ನಿತ್ಯಾನಂದ, ಆಡಳಿತ ವಿಭಾಗದ ರಿಜಿಸ್ಟ್ರಾರ್ ಡಾ.ಬಿ.ಪಿ. ಸಂಪತ್‍ಕುಮಾರ್ ಹಾಗೂ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಶಾಂತಿಪ್ರಕಾಶ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *