Header Ads
Breaking News

ಉಡುಪಿಯಲ್ಲಿ ಐಸಿಯು ಬೆಡ್‍ಗಳು ತುಂಬಿಕೊಂಡಿವೆ

ಪರಿಸ್ಥಿತಿ ಕೈ ಮೀರುತ್ತಿದೆ. ಉಡುಪಿಯಲ್ಲಿ ಐಸಿಯು ಬೆಡ್‍ಗಳು ತುಂಬಿಕೊಂಡಿವೆ. ಹೀಗಾಗಿ ಸೊಂಕಿನ ಲಕ್ಷಣಗಳು ಕಂಡು ಬಂದಲ್ಲಿ ದಯವಿಟ್ಟು ಪರೀಕ್ಷೆ ಮಾಡಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಉಡುಪಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಕೆಲವರು ಸೊಂಕಿನ ಲಕ್ಷಣಗಳು ಇದ್ರು ಕೂಡ ಮನೆಯಲ್ಲಿ ಉಳಿದುಕೊಂಡು ಕೊನೆ ಕ್ಷಣದಲ್ಲಿ ನೇರವಾಗಿ ಐಸಿಯು ದಾಖಲಾಗುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಉಂಟಾಗಿದೆ. ತಮಗೂ ಸೊಂಕಿದ್ದು ಕುಟುಂಬದ ಇತರರಿಗೂ ಸೊಂಕು ಹಬ್ಬಿಸಿರುವ ಪ್ರಕರಣಗಳು ಜಾಸ್ತಿಯಾಗಿವೆ.

ಹೀಗಾಗಿ ಸಾರ್ವಜನಿಕರು ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ್ದು, ಸಾರ್ವಜನಿಕರು ಅದಷ್ಟು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಂಬಂಧಿಕರಿಂದಲೂ ದೂರವಿರುವಂತೆ ಮನವಿ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *