Header Ads
Breaking News

ಉಡುಪಿಯಲ್ಲಿ ಕ್ರಿಕೆಟ್ ಪಂದ್ಯಾಕೂಟ :ಸಾರ್ವಜನಿಕರಿಂದ ಭಾರೀ ಆಕ್ರೋಶ

ಉಡುಪಿಯಲ್ಲಿ ಜನರಿಗೊಂದು ಕಾನೂನು .ಅಧಿಕಾರಿಗಳಿಗೆ ,ರಾಜಾಕಾರಣಿಗಳಿಗೆ ಇನ್ನೊಂದು ಕಾನೂನು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಡೀ ರಾಜ್ಯದಲ್ಲಿ ಕೊವಿಡ್ ಸೊಂಕು ಹಬ್ಬುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಾಕಿರುವ ವಿಕೇಂಡ್ ಕರ್ಪ್ಯೂಗೆ ಜನತೆ ಮನೆಯಲ್ಲಿದ್ರೆ. ಉಡುಪಿಯ ಮಠದ ಬೆಟ್ಟಿನಲ್ಲಿ ರಾಜಕೀಯ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಕ್ರಿಕೆಟ್ ಮ್ಯಾಚ್ ಅಯೋಜಿಸಲಾಗಿತ್ತು. ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಮಠದ ಬೆಟ್ಟು ಗದ್ದೆಯಲ್ಲಿ ಏಳು ತಂಡಗಳ ಎಂಎಫ್ ಸಿ ಟ್ರೋಫಿ ಅಯೋಜಿಸಲಾಗಿತ್ತು. ಯಾವುದೇ ಸಾಮಾಜಿಕ ಅಂತರ ವಿಲ್ಲದೇ,ಸರಕಾರದ ನಿಯಮಗಳನ್ನಯ ಉಲ್ಲಂಘಿಸಿ ಕರ್ಪ್ಯೂ ಮಧ್ಯೆ ಕ್ರಿಕೆಟ್ ಪಂದ್ಯಾಟ ನಡೆಸಲಾಗಿದೆ. ಪಂದ್ಯಾಟಕ್ಕೆ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಭಾಗಿಯಾಗಿದ್ದು, ಕೊವೀಡ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರೂ ಕೂಡ ಅಧಿಕಾರಿಗಳು ರಾಜಾಕಾರಣಿಗಳ ಪ್ರಭಾವಕ್ಕೆ ಮಣಿದು ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಕ್ರಿಕೆಟ್ ಪಂದ್ಯಾಟಕ್ಕೆ ಕೆಲವೊಂದು ನಗರ ಸಭಾ ಸದಸ್ಯರು ಭಾಗಿಯಾಗಿದ್ದರು ಎನ್ನಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾ ಧಿಕಾರಿಗಳು ಕ್ರಿಕೆಟ್ ಪಂದ್ಯಾಟ ನಡೆಸಿರುವ ಅಯೋಜಕರ ಮೇಲೆ ಕೋವಿಡ್ ನಿಯಮ ಉಲ್ಲಂಘಿಸಿದ ಅರೋಪದಲ್ಲಿ ಪ್ರಕರಣ ದಾಖಲಿಸುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *