Header Ads
Breaking News

ಉಡುಪಿಯಲ್ಲಿ ತೌಕ್ತೆ ಚಂಡಮಾರುತದ ಎಫೆಕ್ಟ್: ತ್ರಾಸಿಯ ಬೆಣ್ಗೆರೆಯಲ್ಲಿ ಮನೆಗಳು ಜಲಾವೃತ

ಉಡುಪಿ: ತೌಕ್ತೆ ಚಂಡ ಮಾರುತಾ ಅಬ್ಬರಕ್ಕೆ ಉಡುಪಿಯ ತ್ರಾಸಿ ಬಳಿಯ ಬೆಣ್ಗೆರೆ ಮತ್ತು ಕಂಚಗೋಡು ಗ್ರಾಮಸ್ಥರು ಅಕ್ಷರಶಃ ನಲುಗಿ ಹೋಗಿದ್ದಾರೆ.ರಕ್ಕಸ ಗಾತ್ರದ ಕಡಲ ಅಲೆಗಳು ನುಗ್ಗಿ ನೂರಾರು ಮನೆಗಳು ಜಲವೃತವಾಗಿವೆ. ಕೆಲವೊಂದು ಮನೆಗಳಿಗೆ ಹಾನಿಯುಂಟಾಗಿದೆ.ಮೀನುಗಾರರೇ ಹೆಚ್ಚಾಗಿ ಇರುವ ಈ ಪ್ರದೇಶ ದಲ್ಲಿ ಹಲವು ಮೀನುಗಾರಿಕಾ ಶೆಡ್ ಗಳು ಕಡಲು ಪಾಲಾಗಿವೆ.ಮೀನುಗಾರಿಕಾ ಸಲಕರಣೆಗಳು, ಕಡಲ ತೀರದಲ್ಲಿದ್ದ ದೋಣಿಗಳಿಗೆ ಅಲೆಗಳ ರೌದ್ರಾವತಾರಕ್ಕೆ ಹಾನಿಯುಂಟಾಗಿದೆ.

ಸಮುದ್ರದ ನೀರು ಜನ ವಸತಿ ಪ್ರದೇಶಗಳಿಗೆ ನುಗ್ಗಿದೆ. ಜಿಲ್ಲಾಡಳಿತ ಹಲವರನ್ನು ಈ ಭಾಗದಿಂದ ಸ್ಥಳಾಂತರ ಮಾಡಿದ್ದಾರೆ.ಅದ್ರೆ ಇನ್ನೂ ಕೆಲವರು ಇಲ್ಲಿಂದ ಸ್ಥಳಾಂತರವಾಗಲು ಹಿಂದೇಟು ಹಾಕಿದ್ದಾರೆ.

ಹಲವು ವರುಷಗಳಿಂದ ಮಳೆಗಾಲದಲ್ಲಿ ಸಮುದ್ರ ನೀರು ಉಕ್ಕಿ ಮನೆಗಳಿಗೆ ನುಗ್ಗುತ್ತಿದೆ.ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ.ಅದ್ರೆ ಈವರೆಗೂ ತಡೆಗೋಡೆ ಹಾಕಿಲ್ಲ.ತಡೆಗೋಡೆ ಹಾಕಿದ್ದರೆ.ಇಷ್ಟೊಂದು ಹಾನಿ ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯ ಮೀನುಗಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಮೀನುಗಾರಿಕಾ ವೃತ್ತಿಯನ್ನೇ ನಂಬಿ ಬದುಕುತ್ತಿದ್ದೆವೆ, ನಮ್ಮ ಬೇಡಿಕೆಗಳನ್ನು ಈವರೆಗೂ ಈಡೇರಿಸಿಲ್ಲ. ಈಗ ಧೀಡರನೇ ಸ್ಥಳಾಂತರ ಮಾಡಿದ್ರೆ ನಾವೆಲ್ಲಿಗೆ ಹೋಗುದು.ನಾವು ಇಲ್ಲಿಂದ ಸ್ಥಳಾಂತರ ಅಗಲ್ಲ ಅಂತಾ ಸ್ಥಳಿಯರು ಪಟ್ಟು ಹಿಡಿದಿದ್ದಾರೆ.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಲ್ಲಿಗೆ ಬರಲಿ. ನಮ್ಮ ಸಮಸ್ಯೆಗೆ ಮೊದಲು ಸ್ಪಂದಿಸಲಿ ಎನ್ನುವ ಅಗ್ರಹವನ್ನು ಮಿನುಗಾರರು ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *