Header Ads
Breaking News

ಉಡುಪಿಯ ಕುಕ್ಕೆಹಳ್ಳಿಯಲ್ಲಿ ಬಾವಿಗೆ ಬಿದ್ದ ನಾಗರ ಹಾವಿನ ರಕ್ಷಣೆ

ಉಡುಪಿ: ಉಡುಪಿಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ದೊಡ್ಡ ನಾಗರ ಹಾವೊಂದು ಅಯತಪ್ಪಿ ಬಿದ್ದಿತ್ತು. ಬಾವಿ ನೀರು ಎತ್ತಲು ತೆರಳಿದ ಕೊರ್ಗು ನಾಯ್ಕರು ಹಾವನ್ನು ಕಂಡು ಹೌಹಾರಿದ್ದರು. ನೀರು ತುಂಬಿದ ಬಾವಿಯ ಇಕ್ಕೆಲದಲ್ಲಿ ಹಾವು ರಕ್ಷಣೆಗಾಗಿ ಕೂತಿತ್ತು.

ಉರಗ ತಜ್ಞ ಸಾಲಿಗ್ರಾಮದ ಸುಧೀಂದ್ರ ಐತಾಳ್ ಸ್ಥಳಕಾಗಮಿಸಿ ನಾಗರ ಹಾವಿನ ರಕ್ಷಣೆಗೆ ಮುಂದಾದ್ರು. ಸುರಿವ ಮಳೆಯಲ್ಲಿ ಬಾವಿಗೆ ಇಳಿಯಲು ಕಷ್ಟವಾದ್ದರಿಂದ, ಮೇಲುಗಡೆಯಿಂದಲೇ ಬಕೆಟ್ ಇಳಿಸಿ ಹಾವನ್ನ ಮೇಲಕ್ಕೆತ್ತಲಾಯಿತು.

Related posts

Leave a Reply

Your email address will not be published. Required fields are marked *