Header Ads
Breaking News

ಉಡುಪಿಯ ಮಂಗಳ ಮುಖಿಯ ಕಷ್ಟಕ್ಕೆ ಸ್ಪಂದಿಸಿದ ನಟ ಕಿಚ್ಚ ಸುದೀಪ

Kicha Sudeepa Charitable Society

ಕೊರೊನಾ ಎಲ್ಲ ವರ್ಗದ ಜನರಿಗೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯನ್ನು ತಂದೊಡ್ಡಿದೆ. ಇದರಿಂದ ಮುಂಗಳಮುಖಿಯರೂ ಕೂಡ ಹೊರತಾಗಿಲ್ಲ, ದಿನ ನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ತೃತೀಯ ಲಿಂಗಿಗಳದ್ದು, ಹೀಗಾಗಿ ತಮಗೆ ಸಹಾಯ ಮಾಡಿ ಅಂತ ಉಡುಪಿಯ ಮಂಗಳ ಮುಖಿಯೊಬ್ಬರು ನಟ ಕಿಚ್ಚ ಸುದೀಪ್ ಅವರಿಗೆ ಸಂದೇಶ ಕಳುಹಿಸಿದ್ರು, ಮುಂಗಳಮುಖಿರ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಮೂಲಕ ಸಹಾಯ ದಿನಸಿ ಕಿಟ್ ಕಳುಹಿಸಿಕೊಟ್ಟಿದ್ದಾರೆ..Kicha Sudeepa Charitable Society

ಮುಂಗಳಮುಖಿಯರನ್ನು ಸಮಾಜ ನೋಡೋ ದೃಷ್ಠಿನೇ ಬೇರೆ. ಅದು ಒಂದು ರೀತಿಯ ವಿಚಿತ್ರ ನೋವಿನ ಬದುಕು. ಅಂತಹ ವರ್ಗ ಕೊರೊನಾ ಎರಡನೇ ಅಲೆಯಿಂದ ಸಂಪೂರ್ಣ ಕಂಗೆಟ್ಟಿದೆ. ಇಂತಹವರಿಗೆ ಸಹಾಯ ಮಾಡಲು ಮುಂದೆ ಬರೋ ಜನ ಬಹಳ ಕಡಿಮೆ. ಸದ್ಯದ ಪರಿಸ್ಥಿತಿಯಲ್ಲಿ ಊಟಕ್ಕೂ ಕೆಲವು ಮಂಗಳ ಮುಖಿಯರು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ನಮಗೆ ಸಹಾಯ ಮಾಡಿ ಅಂತ ಉಡುಪಿಯ ಬೈಲೂರಿನಲ್ಲಿ ವಾಸ ಇರುವ ಮಂಗಳಮುಖಿ ಸಾನಿಯಾ ಅವರು, ಇನ್ಟ್ ಗ್ರಾಂನಲ್ಲಿ ಸ್ಯಾಂಡಲ್‍ವುಡ್‍ನ ಖ್ಯಾತ ನಟ ಕಿಚ್ಚ ಸುದೀಫ್ ಅವರಿಗೆ ಸಂದೇಶ ಕಳುಹಿಸಿದ್ರು, ಸಾನಿಯಾ ಅವರ ಸಂದೇಶ ನೋಡಿದ ಸುದೀಪ್ ಡೀಟೆಲ್ ಕಳುಹಿಸಲು ಹೇಳಿ ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಕಿಟ್ಟಿ ಅಣ್ಣ ಅಂತ ನಿಮಗೆ ಕಾಲ್ ಮಾಡ್ತಾರೆ ಅಂತ ರೀಪ್ಲೇ ಮಾಡಿ, ವಿಳಾಸ ಪಡೆದು ಉಡುಪಿ ದಕ್ಷಿಣ ಕನ್ನಡದ ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿ ಇನ್ ಚಾರ್ಜ್ ಆರ್ಯ ದೀಪ್ನಾ ಕರ್ಕೇರಾ ಅವರ ಮೂಲಕ ದಿನಸಿ ಸಾಮಾಗ್ರಿಗಳ ಕಿಟ್ ಕಳುಹಿಸಿಕೊಟ್ಟಿದ್ದಾರೆ.Kicha Sudeepa Charitable Society

ದಿನಸಿ ಕಿಟ್‍ನಲ್ಲಿ ಒಂದು ತಿಂಗಳಿಗೆ ಆಗುವಷ್ಟು ವಸ್ತುಗಳು ಇದ್ದು, ದಿನಸಿ ಕಿಟ್‍ನ್ನು ಮಂಗಳೂರಿನಿಂದ ಬಂದು ಮಂಗಳಮುಖಿಯವರು ವಾಸಿಸುವ ಮನೆಗೆ ಬಂದು ಕಿಚ್ಚ ಸುದೀಪಾ ಚಾರಿಟೇಬಲ್ ಸೊಸೈಟಿಯವರು ನೀಡಿದ್ದಾರೆ. ಸ್ಟಾರ್ ನಟ ಸುದೀಪ್ ಅವರಿಗೆ ಲಕ್ಷಾಂತರ ಮಂದಿ ಮೆಸೇಜ್ ಮಾಡ್ತಾರೆ ಹೀಗಾಗಿ ನಮ್ಮ ಸಂದೇಶವನ್ನು ನೋಡ್ತಾರೆ ಅಂತ ನಿರೀಕ್ಷೆ ಇರಲಿಲ್ಲ, ಆದ್ರೆ ಮೆಸೆಜ್ ನೋಡಿ ಕಿಟ್ ಕಳುಹಿಸಿದ್ದು ತುಂಬಾ ಖುಷಿ ಕೊಟ್ಟಿದೆ ಅಂತಾರೆ ಮುಂಗಳ ಮುಖಿ ಸಾನಿಯಾ.ಒಟ್ನಲ್ಲಿ ದಿನನಿತ್ಯ ಹಲವಾರು ಮಂದಿಗೆ ಸಹಾಯ ಮಾಡುವ ಕಿಚ್ಚ ಸುದೀಪ್, ಮುಂಗಳಮುಖಿಯ ಮೆಸೇಜ್ ನೋಡಿ ಸಹಾಯ ಮಾಡಿದ್ದು ನಿಜಕ್ಕೂ ಶ್ಲಾಘನೀಯ.

 

Related posts

Leave a Reply

Your email address will not be published. Required fields are marked *