Header Ads
Breaking News

ವಿಮಾನ ನಿಲ್ದಾಣದ ಅದಾನಿ ಹೆಸರನ್ನು ತೆಗೆಯದಿದ್ದರೆ ನಾವು ಮಸಿ ಬಳಿಯುತ್ತೇವೆ : ಐವನ್ ಡಿಸೋಜಾ ಸವಾಲ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಹೆಸರನ್ನು ತೆಗೆಯದಿದ್ದರೆ ನಾವು ಮಸಿ ಬಳಿಯುತ್ತೇವೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಸವಾಲ್ ಹಾಕಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಮಾನಗಳ ಹಾರಾಟ ಕಡಿಮೆಯಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಬಜ್ಪೆ ಏರ್ ಪೊರ್ಟ್ ನಲ್ಲಿ ಪ್ರಗತಿ ಕುಂಠಿತವಾಗಿದೆ. ದಿಲ್ಲಿ, ಮುಂಬೈ ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಗಿದೆ. ಬೆಳಗಾಂ, ಗುಲ್ಬರ್ಗಾ, ಗೋವಾ, ಮೈಸೂರಿಗೆ ಮಂಗಳೂರಿನಿಂದ ಹೋಗಲು ವಿಮಾನ ಇಲ್ಲ. ನಮ್ಮ ಜಿಲ್ಲೆಯ ಸಂಸದರು, ಕೇಂದ್ರ ಸಚಿವ್ರು ಏನ್ ಮಾಡ್ತಾರೆ ಎಂದು ಕಿಡಿಕಾರಿದ ಅವರು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವಿಮಾನ ಕಂಪನಿಗಳು ಮಂಗಳೂರಿನಿಂದ ವಿಮಾನಗಳನ್ನು ಹಾರಾಟ ಮಾಡಲು ಮುಂದೆ ಬರ್ತಿಲ್ಲ ಎಂದ್ರು. ಇನ್ನು ಏರ್ ಪೆÇೀರ್ಟ್ ನಿಂದ ನಗರಕ್ಕೆ ಹೋಗಲು ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕೂಡಾ ಇಲ್ಲ. ವಿಮಾನ ನಿಲ್ದಾಣದಲ್ಲಿ arrival & departure ಬೇರೆ ಬೇರೆ ಕಡೆ ವ್ಯವಸ್ಥೆ ಮಾಡಲು ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಸಿದ್ರೂ ಇನ್ನೂ ಜಾರಿಯಾಗಿಲ್ಲ ಎಂದ ಅವರು, ಮಂಗಳೂರು ಏರ್ ಪೊರ್ಟ್ ಪ್ರಗತಿ ಅಭಿವೃದ್ಧಿ ಮಾಡುವಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ವಿವೇಕ್ ರಾಜ್, ಸುಭೋದಯ ಆಳ್ವ, ಮನಪಾ ಪ್ರತಿಪಕ್ಷ ನಾಯಕ ಎಸಿ ವಿನಯ್ ರಾಜ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರುಕ್ಮಾನ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಅಪ್ಪಿ ಹಾಗೂ ಮತ್ತಿತರರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *