Header Ads
Breaking News

ಉಳ್ಳಾಲದ ಆಕೀಫ್ ಕೊಲೆ ಪ್ರಕರಣ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನೆ

ಜಸ್ಟಿಸ್ ಫಾರ್ ಆಕಿಫ್ ನಾಗರಿಕರ ಸಮಿತಿ ಕೆ.ಸಿ ರೋಡ್ ಇದರ ಆಶ್ರಯದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಕೆಸಿ. ರೋಡ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕೊಲೆಯಾದ ಆಕೀಫ್ ಪ್ರಕರಣದ ಆರೋಪಿಯ ಮನೆಯನ್ನು ಗುಟ್ಟಾಗಿ ಸ್ಥಳಾಂತರಿಸಲಾಗುತಿತ್ತು, ಈ ಬಗ್ಗೆ ಪೊಲೀಸ್ ಕಮೀಷನರ್ ಗಮನ ಸೆಳೆದಾಗ ಪ್ರಕ್ರಿಯೆ ನಿಂತಿತ್ತು. ಇದು ಸಾಕ್ಷ್ಯ ನಾಶ ಮಾಡಲು ಮಾಡುತ್ತಿರುವ ತಂತ್ರವಾಗಿದೆ ಎಂದು ಜಸ್ಟಿಸ್ ಫಾರ್ ಆಕಿಫ್ ನಾಗರಿಕರ ಸಮಿತಿ ಕೆಸಿರೋಡ್ ಮುಖಂಡ ಖಲೀಲ್ ತಲಪಾಡಿ ಆರೋಪಿಸಿದ್ದಾರೆ.
ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸವಾದ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಇದಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಯ ಮುಂಭಾಗ ದಲ್ಲಿ ಪ್ರತಿಭಟನೆ ನಡೆಸಲು ತಯಾರಿದ್ದೇವೆ ಎಂದು ಎಚ್ಚರಿಸಿದರು.ಈ ವೇಳೆ ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಯಂ ಘೋಷಿತ ಬಂದ್ ಮಾಡಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಸ್ಥಳೀಯರಾಗಿರುವ ಮೊಯ್ದಿನ್ ಬಾವಾ, ಅಶ್ರಫ್ ಕೆಸಿರೋಡ್, ಸಿದ್ದೀಕ್ ಕೊಳಂಗರೆ, ಇರ್ಶಾದ್ ಅಜ್ಜಿನಡ್ಕ, ಖಲೀಲ್ ಕೆಸಿರೋಡ್, ಹಕೀಂ ಕೆಸಿರೋಡ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *