Header Ads
Breaking News

ತಲೆಗೆ ಮುಂಡಾಸು ಕಟ್ಟಿ, ನೇಜಿ ನಾಟಿ ಮಾಡಿ ಸ್ಥಳೀಯರಿಗೆ ಸಾಥ್ ನೀಡಿದ ಶಾಸಕ ಯು.ಟಿ.ಖಾದರ್

ಉಳ್ಳಾಲ: ಮೈಸೂರಿನ ಸುತ್ತೂರು ಮಠದ ಮಾದರಿಯಲ್ಲಿ ಉಳ್ಳಾಲದ ಉಳಿಯದಲ್ಲಿ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಕೃಷಿ ಜಾತ್ರೆಯನ್ನು ಹಮ್ಮಿಕೊಳ್ಳುವ ಕಾರ್ಯ ಆಗಬೇಕು ಇದಕ್ಕೆ ಬೇಕಾದ ಬೆಂಬಲವನ್ನು ಶಾಸಕನ ನೆಲೆಯಲ್ಲಿ ಕೊಡಲು ಸಿದ್ಧ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಉಳಿಯದ ಧರ್ಮರಸರ ಕ್ಷೇತ್ರಕ್ಕೆ ಒಳಪಟ್ಟ ಗದ್ದೆಯಲ್ಲಿ ನೇಜಿ ನಾಟಿಗೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶದ ಕೃಷಿ ಪರಂಪರೆಯನ್ನು ಉಳಿಸಿಕೊಂಡು ಯುವಜನರಿಗೆ ಕೃಷಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಧಾರ್ಮಿಕ ಕ್ಷೇತ್ರಗಳು ತೊಡಗಿಸಿಕೊಳ್ಳಬೇಕು. ಮೈಸೂರಿನಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ದೊಡ್ಡ ಮಟ್ಟದ ಕೃಷಿ ಜಾತ್ರೆ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಉಳಿಯದಲ್ಲೂ ಈ ಕಾರ್ಯ ಆಗಬೇಕು ಕೃಷಿ ಹಿಂದೆ ಹೇಗಿತ್ತು, ಈಗ ಹೇಗಿದೆ ಮತ್ತು ಮುಂದಿನ ಚಿಂತನೆಯನ್ನು ಈ ಜಾತ್ರೆಯಲ್ಲಿ ಅಲವಡಿಸಿಕೊಂಡು ಕೃಷಿ ಇಲಾಖೆಯನ್ನು ಇದರಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದರು.

ರೈತರೇ ಬೆನ್ನೆಲುಬು : ದೇಶ ಸ್ವಾತಂತ್ರದ ಸಂದರ್ಭದಲ್ಲಿ ೩೩ ಕೋಟಿ ಜನಸಂಖ್ಯೆ ಇರುವಾಗ ಭಾರತದಲ್ಲಿ ಒಂದು ಹೊತ್ತಿನ ಊಟಕ್ಕೂ ಹೊರದೇಶಕ್ಕೆ ಕೈಚಾಚಬೇಕಿತ್ತು. ಆದರೆ ಇಂದು130 ಕೋಟಿ ಜನಸಂಖ್ಯೆ ಇದ್ದರೂ ನಮ್ಮ ದೇಶದಲ್ಲಿ ಮೂರು ಹೊತ್ತಿನ ಊಟ ಕೊಟ್ಟು ಹೊರದೇಶಗಳಿಗೆ ಆಹಾರ ಸಾಮಾಗ್ರಿಗಳನ್ನು ರಫ್ತು ಮಾಡಲು ರೈತರೇ ಕಾರಣಕರ್ತರಾಗಿದ್ದು ರೈತರು ಈ ದೇಸದ ಬೆನ್ನೆಲುಬುಆಗಿದ್ದು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯ ಆಗಬೇಕು ಎಂದರು. ಮುಂಡಾಸು ಕಟ್ಟಿ ನಾಟಿ ಮಾಡಿದ ಯು.ಟಿ. ಖಾದರ್ : ಶ್ರೀ ಕ್ಷೇತ್ರ ಉಳಿಯದ ಧರ್ಮದರ್ಶಿ ದೇವು ಮೂಲ್ಯಣ್ಣ ನೇತೃತ್ವದಲ್ಲಿ ಶಾಸಕ ಯು.ಟಿ. ಖಾದರ್ ಅವರು ತಲೆಗೆ ಮುಂಡಾಸು ಕಟ್ಟಿಕೊಂಡು ನೇಜಿ ನಾಟಿಮಾಡಿದರು.ಸ್ಥಳೀಯರು ಶಾಸಕರಿಗೆ ಸಾಥ್ ನೀಡಿದರು.

ಶ್ರೀ ಕ್ಷೇತ್ರ ಉಳ್ಳಾಲ ಉಳಿಯದ ಧರ್ಮದರ್ಶಿ ದೇವು ಮೂಲ್ಯಣ್ಣ , ಅಂತ ಗುರಿಕಾರ , ಸುರೇಶ್ ಗುರಿಕಾರ, ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಉಳಿಯ, ಉಮೇಶ್ ಉಳಿಯ, ಯೋಗೀಶ್, ದೇವಕಿಶನ್, ರಾಜೇಶ್ ಬಂಡಸಾಲೆ,ಕಮಾಲ್ ಉಳಿಯ, ಉಳ್ಳಾಲ ನಗರಸಭಾ ಉಪಾಧ್ಯಕ್ಷ ಆಯೂಬ್, ಮಾಜಿ ಅಧ್ಯಕ್ಷ ಬಾಝಿಲ್ ಡಿ.ಸೋಜ, ಸದಸ್ಯರಾದಅಶ್ರಫ್, ವೀಣಾ ಉಳಿಯ, ಭಾರತಿ, ಸ್ವಪ್ನಾ ಹರೀಶ್, ಸ್ಥಳೀಯರಾದ ರಿಯಾಝ್,ತ್ವಾಹ, ತಂಝಿಲ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *