Header Ads
Breaking News

ಎಕ್ಕೂರು ಸಮೀಪ ಬಸ್-ಬೈಕ್ ಅಪಘಾತ : ಬೈಕ್ ಸವಾರನ ಸ್ಥಿತಿ ಚಿಂತಾಜನಕ

ಲಾರಿ ಹಿಂಬದಿಗೆ ಢಿಕ್ಕಿ ಹೊಡೆದ ಸ್ಕೂಟರ್ ಸವಾರ ಬಳಿಕ ಬಸ್ಸಿನಡಿ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾ.ಹೆ 66ರ ಎಕ್ಕೂರು ಬಳಿ ಸಂಭವಿಸಿದೆ. ಗುರಗಾಂವ್ ನಿವಾಸಿ ಧೀಮಂತ್ ರಬೀಂದ್ರ ಗಾಯಾಳು. ಮಂಗಳೂರು ಕಡೆಗೆ ತೆರಳುವ ಸಂದರ್ಭ ಲಾರಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಬಸ್ ಚಲಿಸಿದೆ. ಮೈಪೂರ್ತಿ ಗಂಭೀರ ಗಾಯಗೊಂಡಿರುವ ಧೀಮಂತ್ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Reply

Your email address will not be published. Required fields are marked *