Header Ads
Breaking News

ಎಟಿಎಂ ಯಂತ್ರಕ್ಕೆ ಹಣ ಸಾಗಾಟದ ವಾಹನಕ್ಕೆ ಬೈಕ್ ಢಿಕ್ಕಿ : ಬೈಕ್ ಸವಾರ ಮೃತ್ಯು

ಮಂಜೇಶ್ವರ: ಎಟಿಎಂ ಯಂತ್ರಕ್ಕೆ ಹಣ ಸಾಗಾಟ ಮಾಡುತಿದ್ದ ವಾಹನವೊಂದು ಬೈಕ್‍ಗೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಉದ್ಯಾವರ ಹತ್ತನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕುಂಜತ್ತೂರು ಕುಚ್ಚಿಕ್ಕಾಡ್ ನಿವಾಸಿ ಶಿವಾನಂದ ಎಂಬವರ ಪುತ್ರ ವೆಲ್ಡಿಂಗ್ ಕಾರ್ಮಿಕನಾಗಿರುವ ಸುಧೀರ್ (37)ಸಾವನ್ನಪ್ಪಿದ ದುರ್ದೈವಿ. ಕಾಸರಗೋಡು ಭಾಗದಿಂದ ತಲಪಾಡಿ ಕಡೆ ಹೋಗುತಿದ್ದ ಬ್ಯಾಂಕ್ ಕರ್ತವ್ಯದ ವಾಹನಕ್ಕೆ ಎದುರಿನಿಂದ ಆಗಮಿಸಿದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವೃತೆಯಲ್ಲಿ ಬೈಕ್ ಪೂರ್ಣವಾಗಿಯೂ ನುಜ್ಜುಗುಜ್ಜಾಗಿದೆ. ಸವಾರ ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯರು ಸವಾರನನ್ನು ಆಸ್ಪತ್ರೆಗೆ ಸಾಗಿಸಿ ಸಾವನ್ನು ಖಚಿತ ಪಡಿಸಿದ ಬಳಿಕ ಮಂಗಲ್ಪಾಡಿ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ.ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

Related posts

Leave a Reply

Your email address will not be published. Required fields are marked *