Header Ads
Breaking News

ಎನ್‍ಡಿಎ ಸರ್ಕಾರಕ್ಕೆ ಏಳು ವರ್ಷ ಪೂರ್ಣ : ಸರಳ ಸೇವೆಯ ಮೂಲಕ ಆಚರಣೆ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರ್ಕಾರ ಎರಡನೇ ಅವಧಿಯ ಎರಡನೇ ವರ್ಷ ಪೂರೈಸುವುದರ ಜೊತೆಗೆ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ನಾಡಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದೇಶ ಹೊಸ ಬದಲಾವಣೆಯನ್ನು ಬಯಸಿ 31 ವರ್ಷಗಳ ನಂತರ ರಾಷ್ಟ್ರೀಯ ಪಕ್ಷಕ್ಕೆ ಸರಳ ಬಹುಮತದೊಂದಿಗೆ ಅಧಿಕಾರ ನೀಡಿತು. ದೇಶದ ಜನತೆ ಯಾವ ಬದಲಾವಣೆ ಬಯಸಿದ್ದರು, ಭ್ರಷ್ಟಾಚಾರ, ಸೃಜನ ಪಕ್ಷಪಾತ, ವಂಶವಾದ, ವಂಶವಾದ ಬಡತನ, ನಿರುದ್ಯೋಗ, ಭಯೋತ್ಪಾದನೆ, ದೇಶಾದ್ಯಂತ ಗುಣಮಟ್ಟದ ಮೂಲಭೂತ ಸೌಕರ್ಯದ ಕೊರತೆ, ಗ್ರಾಮೀಣ ಪ್ರದೇಶದ ಅವಗಣನೆ, ದೇಶದ ಜನತೆ ಎಲ್ಲ ಸಂಗತಿಗಳಿಂದ ಬಲದಾವಣೆ ಬಯಸಿದ್ದರು. ಸುಮಾರು 7 ದಶಕಗಳ ಈ ರೀತಿಯ ಆಡಳಿತಕ್ಕೊಂದು ಹೊಸ ದಿಕ್ಕು ನೀಡಿ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನೆಡೆಸುವ ಜವಾಬ್ದಾರಿ ಲೋಕಸಭೆಯನ್ನು ಮೊದಲ ಬಾರಿ ಪ್ರವೇಶಿಸಿ ಮೋದಿಯವರ ಮುಂದೆ ದೊಡ್ಡ ಸವಾಲಾಗಿತ್ತು ಮಾತ್ರವಲ್ಲದೆ ಇದೀಗ ಕೊರೊನಾ ತೌಕ್ತೇ, ಯಾಸ್ ಚಂಡಮಾರುತ ಎದುರಿಸುವುದು ದೊಡ್ಡ ಸ್ವಾಲಾಗಿತು ಎಂದು ಹೇಳಿದರು.
ಆನಂತರ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಮೂಡುಬಿದರೆ ಅವರು ಮಾತನಾಡಿ, ಕೋರೊನಾ ಸೋಂಕನ್ನು ತಡೆಗಟ್ಟುವಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಸೇವಾ ಕಾರ್ಯವನ್ನು ಮಾಡಿದ್ದಾರೆ. ಮನೆ ಮನೆಗೆ ಮಾಸ್ಕ್ ವಿತರಣೆ, ಸಸಿ ನೆಡುವ ಮೂಲಕ ಪ್ರಕೃತಿ ಸಂರಕ್ಷಣೆ, ಕೋವಿಡ್ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವಾನ, ಇಂತ ಅನೇಕ ಸೇವಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು ಯಾವುದೇ ಪಕ್ಷದ ಪ್ರಧಾನಿ ಒಂದು ರಾಜ್ಯಕ್ಕೆ ಭೇಟಿ ನೀಡಿದಾಗ ಪ್ರಧಾನಿಗೆ ಗೌರವ ಕೊಡುವಂತಹುದು ನಿಯಮ. ಆದರೆ ಅದನ್ನು ಮೀರಿ ಪಶ್ಚಿಮ ಬಂಗಳಾದ ಸಿಎಂ ಮಮತಾ ಬ್ಯಾನರ್ಜಿ ಅವರು ಅಗೌರವ ತೋರಿದ್ದು ಸರಿಯಲ್ಲ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಜಗದೀಶ್ ಶೇಣವ, ರವಿಶಂಕರ್ ಮಿಜಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *