Header Ads
Breaking News

ಎಪ್ರಿಲ್ 13ರಂದು ವಿ4 ಸ್ಟ್ರೀಮ್‍ನಲ್ಲಿ ಪೆನ್ಸಿಲ್‍ಬಾಕ್ಸ್ ತುಳು ಸಿನಿಮಾ ರಿಲೀಸ್

ಎಲ್.ಎಸ್ ಮೀಡಿಯಾ ನಿರ್ಮಾಣ, ದೃಶ್ಯ ಮೂವೀಸ್ ಬ್ಯಾನರ್‍ನಡಿಯಲ್ಲಿ ತಯಾರಾಗಿರುವ ಫೆನ್ಸಿಲ್ ಬಾಕ್ಸ್ ತುಳು ಸಿನಿಮಾ ಎಪ್ರಿಲ್ 13ರಂದು ವಿ4 ಸ್ಟ್ರೀಮ್‍ನಲ್ಲಿ ರಿಲೀಸ್ ಆಗಲಿದೆ. ದಯಾನಂದ ರೈ ನಿರ್ಮಾಣದ, ರಜಾಕ್ ಪುತ್ತೂರು ನಿರ್ದೇಶನದ ಸಿನಿಮಾ ಕನ್ನಡದಲ್ಲಿ ಬಿಡುಗಡೆಗೊಂಡು ಯಶಸ್ಸನ್ನು ಕಂಡಿತು. ಇದೀಗ ತುಳುವಿನಲ್ಲಿ ಫೆನ್ಸಿಲ್‍ಬಾಕ್ಸ್ ಸಿನಿಮಾ ಡಬ್ ಆಗಿ ಬಿಡುಗಡೆಗೊಳ್ಳಲಿದೆ. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ತುಳು ಹಾಡುಗಳು ಸುಶ್ರಾವ್ಯವಾಗಿ ಮೂಡಿ ಬಂದಿದೆ. ಈಗಾಗಲೇ ಯೂಟ್ಯೂಬ್‍ನಲ್ಲೂ ಮೂರು ಹಾಡುಗಳು ಮೆಚ್ಚುಗೆಗಳಿಸಿದೆ.
ಮಕ್ಕಳ ಕನಸುಗಳು ಅವರ ಆಟಗಳು, ಇದರ ಜೊತೆಗೆ ಹಿರಿಯರಿಂದ ಮಕ್ಕಳ ಮೇಲೆ ಆಗುವ ಒತ್ತಡದ ಪ್ರಭಾವಗಳು, ಇದು ಸಮಾಜ ಮೇಲೆ ಬೀರುವ ಪರಿಣಾಮ ಪೆನ್ಸಿಲ್‍ಬಾಕ್ಸ್ ಚಿತ್ರದ ಒಟ್ಟು ಸಾರಂಶ. ಮಕ್ಕಳ ಹಾಸ್ಯಗಳ ರಸದೌತಣ ಜೊತೆಗೆ, ತುಳು ನಾಡಿನ ದಿಗ್ಗಜರಾದ ಅರವಿಂದ ಬೋಳಾರ್, ಭೋಜರಾಜ್ ವಾಮಾಂಜರು ಹಾಗೂ ಇತರೆ ಕಲಾವಿದರ ಹಾಸ್ಯದ ತುಣುಕುಗಳು ಭರಪೂರ ಚಿತ್ರ ಮನರಂಜನೆಯನ್ನು ಒದಗಿಸುತ್ತದೆ.


ತುಳು ಭಾಷೆಯಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಭೋಜರಾಜ್ ವಾಮಂಜೂರು, ರಮೇಶ್ ರೈ ಕುಕ್ಕವಳ್ಳಿ. ದೀಕ್ಷಾ ಡಿ. ರೈ, ಓಂಕಾರ್ ಸಾಯಿಕೃಷ್ಣ, ರಜೀತ್ ಕದ್ರಿ, ಕುಮಾರಿ ಚೈತ್ರ, ಮಾಸ್ಟರ್ ವಿಜಯ್, ಮಾಸ್ಟರ್ ಪವನ್ ಶೆಟ್ಟಿ, ಕವಿತಾ, ಶೃತಿ, ಇನ್ನಿತರು ಧ್ವನಿ ನೀಡಿದ್ದಾರೆ. ವಿನೋದ್ ರಾಜ್ ಕೋಕಿಲಾ, ಕ್ಷಿತಿ ಕೆ.ರೈ ಧರ್ಮಸ್ಥಳ, ಜನ್ಯ ಪ್ರಸಾದ್ ಹಾಡುಗಳನ್ನು ಹಾಡಿದ್ದಾರೆ. ಜಯಕೀರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಸಾಂಗ್ ಮೂಡಿಬಂದಿದೆ. ರಜಾಕ್ ಪುತ್ತೂರು ಅವರ ಸಾಹಿತ್ಯದಲ್ಲಿ ರಚನೆಗೊಂಡ ಸಾಂಗ್ ಇದಾಗಿದ್ದು, ತುಳುವಿನಲ್ಲಿ ಸುಂದರವಾಗಿ ಹಾಡು ಮೂಡಿಬಂದಿದೆ.
ವಿ4 ಸ್ಟ್ರೀಮ್‍ನಲ್ಲಿ ಸ್ಟುಡಿಯೋದಲ್ಲಿ ಚಿತ್ರದ ಧ್ವನಿ ಮುದ್ರಣವನ್ನು ನಿರ್ಮಿಸಿದ್ದು, ಸೌಂಡ್ ಇಂಜಿನಿಯರ್ ಆಗಿ ಸನ್ನತ್ ಬಳ್ಕೂರು, ಡಬ್ಬಿಂಗ್ ನಿರ್ವಹಣೆಯನ್ನು ಮೈಮ್ ರಾಮ್‍ದಾಸ್ ವಹಿಸಿದ್ದರು. ಎಲ್.ಎಸ್ ಮೀಡಿಯಾ ನಿರ್ಮಾಣ, ದೃಶ್ಯ ಮೂವೀಸ್ ಬ್ಯಾನರ್‍ನಡಿಯಲ್ಲಿ ತಯಾರಾಗಿರುವ ಫೆನ್ಸಿಲ್ ಬಾಕ್ಸ್ ಸಿನಿಮಾ ತುಳು ಮೂಡಿಬಂದಿದೆ. ಎಪ್ರಿಲ್ 13ರಂದು ವಿ4 ಸ್ಟ್ರೀಮ್‍ನ ಆ್ಯಪ್‍ನಲ್ಲಿ ಸಿನಿಮಾ ತೆರೆಕಾಣಲಿದೆ.

Related posts

Leave a Reply

Your email address will not be published. Required fields are marked *