Header Ads
Breaking News

ಐಎಸ್‍ಪಿಆರ್‍ಎಲ್ ಘಟಕವನ್ನು ಖಾಸಾಗಿಕರಣ ಮಾಡಿದ್ರೆ ಹೋರಾಟ : ಸಚಿವ ವಿನಯ ಕುಮಾರ್ ಸೊರಕೆ ಎಚ್ಚರಿಕೆ

ದೇಶ ರಕ್ಷಣೆಗಾಗಿ ಸ್ಥಾಪಿತಗೊಂಡಿರುವ ಕಾಪು ಸಮೀಪದ ಪಾದೂರು ಕಚ್ಚಾತೈಲ ಘಟಕವನ್ನು ಇದೀಗ ರಾಷ್ಟ್ರಾಭಿಮಾನದ ಮುಖವಾಡ ಧರಿಸಿಕೊಂಡು ಖಾಸಾಗಿ ಮಾಡ ಹೊರಟಿರುವುದು ಖಂಡನೀಯ ಇದನ್ನು ಜನ ಎಂದೂ ಒಪ್ಪುವುದಿಲ್ಲ, ಇದನ್ನು ಕೈ ಬಿಡಬೇಕು ತಪ್ಪಿದ್ದಲ್ಲಿ ಜಾತಿ-ಮತ-ಪಕ್ಷಭೇದ ಮರೆತು ಉಗ್ರ ಹೋರಾಟ ನಡೆಸುವುದಾಗಿ ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಎಚ್ಚರಿಸಿದ್ದಾರೆ.
ಕಾಪು ರಾಜೀವ ಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದೂರಿನಲ್ಲಿ ದೇಶ ರಕ್ಷಣೆಗಾಗಿ ಕಚ್ಚಾತೈಲ ಘಟಕ ಐಎಸ್‍ಪಿಆರ್‍ಎಲ್ ನಿರ್ಮಾಣವಾಗುವ ಸಂದರ್ಭ ಸ್ಥಳೀಯ ರೈತರು ಸರ್ಕಾರ ನೀಡಿದ ಒಂದಿಷ್ಟು ಪರಿಹಾರವನ್ನು ಯಾವುದೇ ತಕರಾರು ಮಾಡದೆ ಪಡೆದುಕೊಂಡಿದ್ದರು, ಕಾರಣ ಈ ಮೂಲಕವಾದರೂ ದೇಶ ಸೇವೆಗೆ ಒಂದಿಷ್ಟು ನಮ್ಮ ಕೊಡುಗೆಯೂ ಇರಲಿ ಎಂಬ ಭಾವಣೆಯಿಂದ, ಆದರೆ ಇದೀಗ ರಕ್ಷಾಣಾ ಇಲಾಖೆಯ ಕೈಯಲ್ಲಿದ್ದ ಘಟಕದ ರಕ್ಷಾಣಾ ಜವಾಬ್ದಾರಿಯನ್ನು ಪೆಟ್ರೋಲಿಂ ಇಲಾಖೆಗೆ ಹಸ್ತಾಂತರಿಸಿದ್ದು, ಇದೀಗ ಅದು ಖಾಸಗಿಯವರು ನಿರ್ವಾಹಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದು ಕೂಡಾ ಮುಖ್ಯ ಟೆಕ್ನಿಕಲ್ ಹುದ್ದೆಯೂ ಖಾಲಿಯಾಗಿದ್ದು… ಘಟಕದಲ್ಲಿ ಕಚ್ಚಾತೈಲ ಸೋರಿಕೆಯಾಗುವ ಮೂಲಕ ಅಪಾಯದ ಮುನ್ನುಸೂಚನೆ ನೀಡುತ್ತಿದೆ. ಇಷ್ಟಾದರೂ ಮತ್ತೆ ಎರಡನೇ ಹಂತಕ್ಕಾಗಿ ಕಾನೂನು ಬಾಹಿರವಾಗಿ ಜನ ನಿಬಿಡ ಪ್ರದೇಶವನ್ನು ಸರ್ವೇ ನಡೆಸಿ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೂ ಜನ ಸೈ ಎನ್ನುತ್ತಾರೆ ಕಾರಣ ರಾಷ್ಟ್ರಾಭಿಮಾನ, ಆದರೆ ಅವರು ಕಾನೂನಿನ ಪ್ರಕಾರ ಜಾಗದ ಮೂರುಪಟ್ಟು ಪರಿಹಾರ ನೀಡುವ ಮೂಲಕ ಜನರಿಗೆ ಪೂರಕ ವ್ಯವಸ್ಥೆ ಕಲ್ಪಿಸ ಬೇಕು, ಹೊರತು ಪಡಿಸಿ ರಾಷ್ಟ್ರಾಭಿಮಾನವನ್ನು ಮುಂದಿಸಿಕೊಂಡು ಈ ಘಟಕವನ್ನು ಖಾಸಗಿಕರಣ ಮಾಡಲು ಹೊರಟರೆ ಸ್ಥಳೀಯ ಜನಜಾಗೃತಿ ವೇದಿಕೆ ಸಹಿತ ಶಿರ್ವದಿಂದ ಸುತ್ತಲ ಸ್ಥಳೀಯ ಸುತ್ತಲ ಗ್ರಾಮದ ಜನರನ್ನು ಸೇರಿಸಿ ಶಿರ್ವದಿಂದ ಪಾದೂರಿಗೆ ಪಾದಯಾತ್ರೆಯಲ್ಲಿ ಬಂದು ಉಗ್ರ ಹೋರಾಟ ನಡೆಸಲಿದ್ದೇವೆ ಎಂಬುದಾಗಿ ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *