Header Ads
Breaking News

ಮಂಜೇಶ್ವರ: ಉರೂಸ್ ಕಾರ್ಯಕ್ರಮಕ್ಕೆ ಚಾಲನೆ

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಉದ್ಯಾವರ ಸಾವಿರ ಜಮಾಹತಿನ ಅಂಗಣದಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಶಹೀದ್ ವಲಿಯುಲ್ಲಾಹಿರವರ ಹೆಸರಲ್ಲಿ ಐದು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್‌ಗೆ ಕಾರ್ಯಕ್ರಮಕ್ಕೆ ಮಖಾಂ ಝಿಯಾರತಿನ ಬಳಿಕ ದರ್ಗಾ ಸಮಿತಿ ಅಧ್ಯಕ್ಷರಾದ ಎ.ಕೆ. ಮೊಹಮ್ಮದ್ ಮೋನು ಹಾಜಿಯವರು ಧ್ವಜಾರೋಹಣ ಗೈಯುವುದರೊಂದಿಗೆ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು.

ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ನಡೆದ ಕಾರ್ಯಕ್ರಮದಲ್ಲಿ ಅತಾವುಲ್ಲಾ ತಂಘಳ್ ರವರ ಮಖಾಮ್ ಝಿಯಾರತಿನ ಬಳಿಕ ಜಮಾಹತ್ ಮುದರಿಸ್ ಅಬ್ದುಲ್ ಖಾದರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಹಾಗೂ ಸಾವಿರ ಜಮಾಹತ್ ಖಾಝಿ ಕೂಡಾ ಆಗಿರುವ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಘಳ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಮರಣ ಎಂಬುದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕಿರುವ ಯಾತ್ರೆಯಾಗಿದೆ. ಅದೇ ರೀತಿ ಅಲ್ಲಾವುವಿನ ಔಲಿಯಾಗಲು, ಅಂಬಿಯಾಕಳು ಮರಣ ಹೊಂದಿದರೂ ಅಲ್ಲಾವುವಿನ ಭಾಗದಲ್ಲಿ ಅವರು ಜೀವಂತವಾಗಿರುತ್ತಾರೆ. ಅಂತಹ ಮಹಾನ್ ವ್ಯಕ್ತಿಗಳನ್ನು ನಾವು ಸ್ಮರಿಸಲೇ ಬೇಕಾಗಿದೆ ಎಂದು ಹೇಳಿ ಊರೂಸ್ ಸಮಾರಂಭಕ್ಕೆ ಶುಭವನ್ನು ಹಾರೈಸಿದರು. ಮಖಾಂ ಝಿಯಾರತ್‌ಗೆ ನೇತೃತ್ವ ನೀಡಿದ ಅಸ್ಸಯ್ಯದ್ ಅತ್ತಾವುಲ್ಲ ತಂಘಳ್ ಮಾತನಾಡಿ ದೇವರಿಗೆ ತೃಪ್ತಿಯಾಗುವ ಕೆಲಸದಲ್ಲಿ ನಾವು ನಿರತರಾಗಬೇಕಾಗಿದೆ. ಔಲಿಯಾಗಳನ್ನು ಪ್ರೀತಿಸಬೇಕಾಗಿದೆ ಎಂದು ಹೇಳಿದ ಅವರು ಉರೂಸ್ ಸಮಾರಂಭಕ್ಕೆ ಶುಭವನ್ನು ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಮಾಹತ್ ಮುದರಿಸ್ ಅಬ್ದುಲ್ ಖಾದರ್ ಮದನಿಯವರು ಮಾತನಾಡಿ ಒಬ್ಬ ಮನು? ದಾನ ಮಾಡುವುದರಿಂದ ಅಥವಾ ನಮಾಜ್ ನಿರ್ವಹಿಸುವುದರಿಂದ ಮಾತ್ರ ಮುಸಲ್ಮಾನನಾಗುವುದಿಲ್ಲ. ಆತ ಅಂಬಿಯಾಕಳನ್ನು ಔಲಿಯಾಕಳನ್ನು ಗೌರವಿಸಬೇಕಾಗಿದೆ ಎಂದು ಹೇಳಿದರು. 

Related posts

Leave a Reply

Your email address will not be published. Required fields are marked *