Header Ads
Breaking News

ಕಂಬಳದ ಕರೆಯ ಪಯಣವನ್ನು ಮುಗಿಸಿದ `ಬೋಳಂತೂರು ಕಾಟಿ’

ಕಂಬಳ ಕ್ಷೇತ್ರದಲ್ಲಿ `ಬೋಳಂತೂರು ಕಾಟಿ’ ಎಂದೇ ಪ್ರಸಿದ್ಧಿ ಪಡೆದು ಪ್ರಶಸ್ತಿಗಳ ಸರದಾರ ಎನಿಸಿಕೊಂಡಿದ್ದ ಬಂಟ್ವಾಳದ ಬೋಳಂತೂರು ದಿ| ಗಂಗಾಧರ ರೈ ಅವರ ಯಜಮಾನಿಕೆಯ ಸುಮಾರು 28 ವರ್ಷರ ಹರೆಯದ `ಬೋಳಂತೂರು ಕಾಟಿ’ ಕೋಣವು ಕಂಬಳದ ಕರೆಯ ಪಯಣವನ್ನು ಮುಗಿಸಿ ಇಹಲೋಕ ತ್ಯಜಿಸಿದೆ.  

  ಕಳೆದ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ದೂರವಾಗಿ ವಿಶ್ರಾಂತಿಯಲ್ಲಿದ್ದ `ಬೋಳಂತೂರು ಕಾಟಿ’ಯು ಬೋಳಂತೂರಿನಲ್ಲಿ ರವಿವಾರ ತಡರಾತ್ರಿ ಅಸುನೀಗಿದ್ದು, ಅದರ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇದರ ಅದ್ವಿತೀಯ ಸಾಧನೆಗಾಗಿ ಸುಮಾರು 3 ವರ್ಷಗಳ ಹಿಂದೆ ಪುತ್ತೂರು ಕಂಬಳದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ `ಬೋಳಂತೂರು ಕಾಟಿ’ಗೆ 25 ವರ್ಷ ತುಂಬಿದ ಸವಿನೆನಪಿಗಾಗಿ ಅದ್ದೂರಿಯಾಗಿ ಸಮ್ಮಾನ ಮಾಡಿರುವುದು ಸ್ಮರಣೀಯವಾಗಿದೆ.
2001ರಲ್ಲಿ ಬೋಳಂತೂರು ಗಂಗಾಧರ ರೈ ಅವರು ಕಾಟಿ-ಮಾತಿಬೆಟ್ಟು ಜೋಡಿಯನ್ನು ಖರೀದಿಸಿದ್ದು, ಪ್ರಾರಂಭದ 2 ವರ್ಷ ಅಜಿತ್‍ಕುಮಾರ್ ಜೈನ್ ಈ ಜೋಡಿಯನ್ನು ಓಡಿಸಿದ್ದರು. ಬಳಿಕ ಅಶೋಕ್‍ಕುಮಾರ್ ಜೈನ್ ಅವರು ಓಡಿಸಿದ್ದು, ಈ ಸಂದರ್ಭ ಸತತ ಮೂರು ವರ್ಷಗಳ ಕಾಲ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿತ್ತು.

Related posts

Leave a Reply

Your email address will not be published. Required fields are marked *