Header Ads
Breaking News

ಕಡಬದಲ್ಲಿ ಮಳೆಯ ನಡುವೆ ಮುಗಿಬಿದ್ದ ಜನತೆ

ಕೊರೋನಾ ಸೋಂಕಿನ ಮದ್ಯೆ ಕಡಬದಲ್ಲಿ ಇಂದು ವರುಣ ಆರ್ಭಟವೂ ಶುರುವಾಗಿದೆ ಇಂದಿನಿಂದ ಎರಡು ವಾರಗಳ ಕಾಲ ಲಾಕ್ ಡೌನ್ ಇರಲಿದ್ದು ಇಂದು ಅಗತ್ಯ ವಸ್ತು ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು.

ಪೇಟೆಯ ಕೆಲ ಅಂಗಡಿಗಳಲ್ಲಿ ಮುಂಜಾನೆಯೇ ಗುಂಪು ಗೂಡಿ ಖರೀದಿಯಲ್ಲಿ ನಿರತರಾಗಿದ್ದನ್ನು ಮನಗಂಡು ಗರಂ ಆದ ಎಸ್.ಐ ರುಕ್ಮ ನಾಯ್ಕ್ ಗುಂಪು ಗೂಡಿದವರನ್ನು ಚದುರಿಸಲು ಲಾಟಿ ಬೀಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಮನವರಿಕೆ ಮಾಡಿದರು. ಇನ್ನು ಗ್ರಾಹಕರಿಗೆ ಮುಂಜಾಗೃತ ಕ್ರಮ ತಿಳಿಸದೆ ವ್ಯಾಪಾರದಲ್ಲೇ ಮುಳುಗಿದ್ದ ಅಂಗಡಿ ಮಾಲಕರಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್.ಐ ಅವರು ಗ್ರಾಹಕರಿಗೆ ವ್ಯವಸ್ಥಿತವಾಗಿ ದಿನಸಿ ಸಮಾನು ನೀಡಲು ಆಗುವುದಿಲ್ಲವಾದರೆ ಅಂಗಡಿ ಕ್ಲೋಸ್ ಮಾಡಿ ಎಂದು ಎಚ್ಚರಿಸಿದರು.

 

Related posts

Leave a Reply

Your email address will not be published. Required fields are marked *