Header Ads
Breaking News

ಕತಾರ್‌ನಲ್ಲಿ ಅತ್ತಾವರ ಮೂಲದ ಯುವಕನ ಮರಣ

ದೋಹ-ಕತಾರ್: ಮಂಗಳೂರಿನ ಅತ್ತಾವರ ಮೂಲದ, 38 ವರ್ಷದ ಸಮೀರ್ ಅಹ್ಮದ್ ಉಮರ್ ಕೆಂಜಾರ್ ಎಂಬ ಯುವಕ, ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮರಣ ಹೊಂದಿದ ಘಟನೆ ನಡೆದಿದೆ.ಮಾರ್ಚ್ 29ರಂದು ತಾನು ವಾಸಿಸುತ್ತಿದ್ದ ರೂಮಿನ ಹತ್ತಿರವಿರುವ ಸೂಪರ್ ಮಾರ್ಕೆಟ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ, ಹೃದಯಾಘಾತವಾಗಿ ಕುಸಿದು ಬಿದ್ದಿದ್ದ ಯುವಕನನ್ನು ನೋಡಿದ ಸಾರ್ವಜನಿಕರು ಅವರನ್ನು ಅಂಬುಲನ್ಸ್‌ನಲ್ಲಿ ನಗರದ ಹೆಸರಾಂತ ಹಮದ್ ಆಸ್ಪತ್ರಗೆ ಕರೆದುಕೊಂಡು ಹೋದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ, ದಿನಾಂಕ 29-03-2021 ರ ಮುಂಜಾನೆ 2.05ರ ಸಮಯ ಕೊನೆ ಉಸಿರೆಳೆದಿದ್ದಾರೆ. ಸಮೀರ್ ಯಾರಲ್ಲೂ ಹೆಚ್ಚು ಸಂಪರ್ಕದಲ್ಲಿರದ ಕಾರಣ, ಮರಣದ ಮೂರು ದಿನಗಳ ನಂತರ, 31-03-2021 ರ ರಾತ್ರಿ, ಹಮದ್ ಆಸ್ಪತ್ರೆಯ ಸಿಬ್ಬಂದಿಯ ಮುಖಾಂತರ, ಮೃತರ ಕುಟುಂಬದವರಿಗೆ ತಿಳಿದಿದೆ.ಮರಣ ವಾರ್ತೆಯನ್ನು ಕೇಳಿ ಕಂಗಾಲಾದ ಕತಾರ್ ನಲ್ಲಿರುವ ಸಬಂಧಿಕರಾದ ಮುಸ್ತಫಾ ಹಾಗೂ ಜು಼ಬೈರ್ ರವರು ವಿಷಯವನ್ನು ಕತಾರ್ ಇಂಡಿಯನ್ ಸೋಷಿಯಲ್ ಫೋರಂನ ನಾಯಕರಿಗೆ ತಿಳಿಸುತ್ತಾರೆ. ತಕ್ಷಣವೇ ಇದಕ್ಕೆ ಸ್ಪಂದಿಸಿದ, ಇಂತಿಯಾಜ್ ಕಾರ್ನಾಡ್, ಬಷೀರ್ ಅಹ್ಮದ್, ಖಾಲಿದ್ ಮೊಹಸಿನ್ ಮತ್ತು ವಜೀ಼ರ್ ಪುಂಜಾಲಕಟ್ಟೆ ರವರನ್ನೂಳಗೊಂಡ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ತಂಡವು ಮರಣ ಹೊಂದಿದ ವ್ಯಕ್ತಿಯನ್ನು ಗುರುತಿಸಲು ಬೇಕಾದ ಮಾಹಿತಿಗಳನ್ನು ಕಲೆ ಹಾಕಿ, ಅವರ ಕುಟುಂಬದ ವರನ್ನು ಸಂಪರ್ಕಿಸಿ, ಕುಟುಂಬದವರ ಆದೇಶದ ಮೇರೆಗೆ, ಮೃತರನ್ನು ಕತಾರ್‌ನಲ್ಲಿಯೇ ಅಂತ್ಯಕ್ರಿಯೆ ಮಾಡಲು ಬೇಕಾದ ಅಪ್ಪಣೆ ಪತ್ರವನ್ನು ತರಿಸಿ, ಪೊಲೀಸ್ ಇಲಾಖೆ, ಆಸ್ಪತ್ರೆಯ ಹಾಗೂ ಭಾರತದ ದೂತವಾಸದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಅಗತ್ಯವಾದ ಎಲ್ಲಾ ದಾಖಲೆಗಳನ್ನು ಕೇವಲ ಒಂದೇ ದಿನದಲ್ಲಿ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನಾಯಕರ ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ, ದಿನಾಂಕ 02-04-2021 ರ ಶುಕ್ರವಾರ ಸಂಜೆ, ಅಸ್ರ್ ನಮಾಜಿನ ನಂತರ, ಕತಾರ್‌ನ ಅಬೂ ಹಮೂರ್‌ನಲ್ಲಿರುವ ದಫನ ಭೂಮಿಯಲ್ಲಿ, ಸಮೀರ್ ರವರ ಅಂತ್ಯಕ್ರಿಯೆಯನ್ನು ಅವರ ಸಂಬಂಧಿಕರ ಹಾಗೂ ಇತರೆ ಸಂಘಟನೆಗಳ ಕೆಲವು ಸದಸ್ಯರ ಸಮ್ಮುಖದಲ್ಲಿ ನೆರವೇರಿಸಿ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಮಾನವವೀಯತೆಯನ್ನು ಮೆರೆದಿದೆ. ಮೃತ ಸಮೀರ್ ಅತ್ತಾವರ ಪತ್ನಿ,ಇಬ್ಬರು ಮಕ್ಕಳು, ತಾಯಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ. ಸಮೀರ್ ರವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಎಲ್ಲಾ ಕುಟುಂಬದ ಸದಸ್ಯರಿಗೂ ಸರ್ವಶಕ್ತನು ದಯಪಾಲಿಸಲಿ ಎಂದು ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಆಶಿಸುತ್ತದೆ.

Related posts

Leave a Reply

Your email address will not be published. Required fields are marked *