Header Ads
Breaking News

ಕರಾವಳಿಯಲ್ಲಿ ಸರಳವಾಗಿ ಈದುಲ್ ಫಿತ್ರ್ ಆಚರಣೆ

ದೇಶದ ಮೇರೆಗೆ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಸಹಿತ ಕರಾವಳಿ ತೀರದ ಮುಸ್ಲಿಮರು ಇಂದು ಅತ್ಯಂತ ಸರಳವಾಗಿ ಈದುಲ್ ಫಿತ್ರ್ ಹಬ್ಬ ಆಚರಿಸಿದರು. ಕರಾವಳಿ ಜಿಲ್ಲೆಗಳಲ್ಲಿ ಮುಸ್ಲಿಂ ಭಾಂದವರು ಈದ್ ಹಬ್ಬವನ್ನು ತಮ್ಮ ಮನೆಗಳಲ್ಲೇ ಆಚರಣೆ ಮಾಡುತ್ತಿದ್ದಾರೆ. ಈಗಾಗಲೇ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಗುರುವಾರ ಈದ್ ಹಬ್ಬವನ್ನು ಸರಳವಾಗಿ ಆಚರಿಸಲು ಸೂಚಿಸಿದ್ದಾರೆ.

ಹಾಗೆಯೇ ಇಂದು ಮಸೀದಿಗಳಲ್ಲಿ ಕೇವಲ ಧರ್ಮಗುರುಗಳು ಮಾತ್ರ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಿದ್ದಾರೆ. ಇನ್ನು ಮಾಜಿ ಸಚಿವ ಯು.ಟಿ.ಖಾದರ್ ಅವರು ಮಂಗಳೂರಿನ ಕಂಕನಾಡಿಯಲ್ಲಿರುವ ನಿವಾಸದಲ್ಲಿಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರೊಂದಿಗೆ ಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್, ಪ್ರತಿಯೊಂದು ಹಬ್ಬದ ಸಂದೇಶ ಕೂಡ ತ್ಮಾಳೆ, ಪ್ರೀತಿ, ಸೋದರತೆ, ಪ್ರತೀಕವಾಗಿ ಈದುಲ್ ಫಿತ್ರ್ ಹಬ್ಬವಾಗಿದೆ. ಈ ವರ್ಷದ ಹಬ್ಬವೂ ಕೂಡ ಮನೆಯಲ್ಲಿಯೇ ಹಬ್ಬವನ್ನು ಆಚರಿಸಲಾಗಿದೆ ಎಂದು ಹೇಳಿದರು

Related posts

Leave a Reply

Your email address will not be published. Required fields are marked *