Header Ads
Breaking News

ಕರಾವಳಿ ಭಾಗದ ಶಾಸಕರ ಟ್ವೀಟ್ ವಾರ್

ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ, ದೀಪ ಹಚ್ಚ ಬೇಕೋ ಎಂದು ತಿಳಿಯುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಖಾದರ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮ್ಮಗೆ ಅವಕಾಶವಿಲ್ಲ . ದೂರದ ಬಹರೈನ್ ನಿಂದ ಬಂದ ಅಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯ ಬೇಕೋ ದೀಪ ಹಚ್ಚ ಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ” ಎಂದು ಮಾಜಿ ಸಚಿವ ಯು.ಟಿ.ಖಾದರ್ ಟ್ವೀಟ್ ಮಾಡಿದ್ರು.


ಇದಕ್ಕೆ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದಕ್ಕಾಗಿ ತಾವು ದೀಪಹಚ್ಚುವುದೋ ಅಥವಾ ಚಪ್ಪಾಳೆ ತಟ್ಟುವ ಅವಕಾಶಕತೆಯಿಲ್ಲ. ನಮ್ಮ ದೇಶದಿಂದ ಬೇರೆ ವಾಕ್ಸಿನ್ ಕಳುಹಿಸಿದಾಗ ಜರೆದವರು ನೀವುಗಳಲ್ಲವೇ…ಈಗ ಬಹರೈನ್ ಪರವಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ. ಮೆಚ್ಚಬೇಕು ನಿಮ್ಮ ಆತ್ಮ ನಿರ್ಭರತೆಯನ್ನು ಎಂದು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರು ಟ್ವೀಟ್ ಮೂಲಕ ಉತ್ತರಿಸಿದರು.

Related posts

Leave a Reply

Your email address will not be published. Required fields are marked *