Header Ads
Breaking News

ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ : ಪತ್ರಕರ್ತರಿಗೆ ಕಿಟ್ ವಿತರಣೆ

ಕಾರ್ಕಳ: ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ರವರು ಕಾರ್ಕಳ ದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಪತ್ರ ಕರ್ತರಿಗೆ ಕಿಟ್ ವಿತರಣಾ ಸಮಾರಂಭ ನಡೆಯಿತು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ಮಾತನಾಡಿ ವಿದ್ಯುತ್, ರಸ್ತೆ ಹಾಗೂ, ನೀರಾವರಿ ವ್ಯವಸ್ಥೆಗಳು ಒಂದು ತಾಲೂಕಿನ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದರಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಶಾಸಕ ವಿ ಸುನೀಲ್ ಕುಮಾರ್ ಮಾತನಾಡಿ ಕರೋನ ಮುಕ್ತ ತಾಲ್ಲೂಕ್ಕಾಗಿ ಪರಿವರ್ತಿಸಲು ಮೂರು ಅಂಶಗಳ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಲ್ಲಿ ಅಳವಡಿಸಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿ ಹಾಗೂ ಸೋಂಕಿತರನ್ನು ಪ್ರತ್ಯೇಕ ವಾಗಿರಿಸಿ,ಕೋವಿಡ್ ಕೇರ್ ಸೆಂಟರ್ ಗಳನ್ನು ನಿರ್ಮಿಸಲಾಗಿದೆ ಇದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಕಾರ್ಕಳ ತಾಲೂಕು ತಹಸಿಲ್ದಾರ್ ಪುರಂದರ ಹೆಗ್ಡೆ ಮಾತನಾಡಿ ವೃತ್ತಿ ಧರ್ಮ ಪಾಲಿಸಿಕೊಂಡು ಕರೊನವನ್ನು ನಿಯಂತ್ರಿಸುವುದು ನಮ್ಮ ಜವಾಬ್ದಾರಿ ಯಾಗಿದೆ ಎಂದರು
ಗೇರು ಮಂಡಳಿಯ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕರೋನ ನಿಯಂತ್ರಣ ಕ್ಕಾಗಿ ವರದಿಗಳ ಮೂಲಕ ಎಚ್ಚರಿಸುವ ಕಾರ್ಯ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಹರಿ ಪ್ರಸಾದ್ ನಂದಳಿಕೆ,ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ, ಕಾರ್ಕಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಷರೀಫ್, ಸಂಘದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *