Header Ads
Breaking News

ಕಸ ವಿಂಗಡಣೆ ಕುರಿತು ಜನರ ಸಹಕಾರ ದೊರೆಯದಿದ್ದರೆ ದಂಡ : ಮನಪಾ ಆಯುಕ್ತ ಅಕ್ಷಯ್ ಶ್ರೀಧರ್

ಕೋವಿಡ್ ನಡುವೆಯೂ ಕಳೆದ ಒಂದು ವಾರದಿಂದ ಕಸ ವಿಂಗಡಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮನಪಾದಿಂದ ನಡೆಯುತ್ತಿದ್ದು, ಜನರೂ ಸಹಕರಿಸುತ್ತಿದ್ದಾರೆ. ಸ್ವಚ್ಛ ಹಾಗೂ ಆರೋಗ್ಯಕರ ಮಂಗಳೂರಿಗೆ ಜನರ ಸಹಕಾರವೂ ಅಗತ್ಯವಿದೆ ಎಂದು ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ದಿನವೊಂದಕ್ಕೆ ಸಂಗ್ರಹವಾಗುವ 250 ಟನ್‍ವರೆಗಿನ ಕಸದಲ್ಲಿ 100 ಟನ್‍ಗಳಷ್ಟು ಕಳೆದ ಕೆಲ ದಿನಗಳಿಂದ ಪ್ರತ್ಯೇಕವಾಗಿಯೇ ಸಂಸ್ಕರಣಾ ಘಟಕ ಸೇರುತ್ತಿದೆ. ಸದ್ಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಸಹಕಾರ ದೊರೆಯದಿದ್ದರೆ ದಂಡ ವಿಧಿಸುವುದು ಅನಿವಾರ್ಯವಾಗಲಿದೆ. ಕೊರೋನ ಸೋಂಕಿಗೊಳಗಾಗಿ ಕ್ವಾರಂಟೈನ್ ಹಾಗೂ ಐಸೋಲೇಶನ್‍ನಲ್ಲಿರುವವರು ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕಾಗಿ ಆರೋಗ್ಯ ಇಲಾಖೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಯನ್ವಯ ಸಂಗ್ರಹಿಸಲು ಹಾಗೂ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪೇಪರ್‍ನಲ್ಲಿ ಸುತ್ತಿ ಅಥವಾ ಹಳದಿ ಬಣ್ಣದ ಬಯೋ ಬ್ಯಾಗ್‍ನಲ್ಲಿ ಹಾಕಿ ನೀಡಬೇಕು ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು.

Related posts

Leave a Reply

Your email address will not be published. Required fields are marked *