Header Ads
Breaking News

ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯಾತ್ರಿ ದೇವಿ ದೇವಸ್ಥಾನದಲ್ಲಿ ಶ್ರೀ ಗಾಯತ್ರಿ ದೇವಿಯ 15ನೇ ವರ್ಧಂತಿ ಉತ್ಸವ

ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯಾತ್ರಿ ದೇವಿ ದೇವಸ್ಥಾನದಲ್ಲಿ ಶ್ರೀ ಗಾಯತ್ರಿ ದೇವಿಯ 15ನೇ ವರ್ಧಂತಿ ಉತ್ಸವ, 42ನೇ ವಾರ್ಷಿಕ ಭಜನಾ ಮಂಗಳೋತ್ಸವ ಹಾಗೂ ಶ್ರೀ ನಾಗದೇವರ ಆಶ್ಲೇಷಾಬಲಿ ನಡೆಯಿತು.

ಪ್ರತ್ರಕರ್ತ ಮೋಹನ್ ಕೆ. ಶ್ರೀಯಾನ್ ಪ್ರಾಸ್ತವಿಕವಾಗಿ ಮಾತನಾಡಿ ದೇವಸ್ಥಾನದ ಹಿನ್ನಲೆ ಹಾಗೂ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು. ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದುಶ್ಚಟಮುಕ್ತರಾಗಿ ಆಧ್ಯಾತ್ಮದತ್ತ ಒಲವು ಮೂಡಿದಾಗ ವ್ಯಕ್ತಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. ಎಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ದೇವಸ್ಥಾನಗಳು ಅಭಿವೃದ್ದಿ ಹೊಂದಲು ಸಾಧ್ಯವಿದೆ ಎಂದರು. ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್. ಮಾವೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅದ್ಭುತ ಶಕ್ತಿ ಇದ್ದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತದೆ, ಅಲ್ಲಿ ಶ್ರಮ ವಹಿಸಿ ಕೆಲಸ ಮಾಡುವ ವ್ಯಕ್ತಿಗಳ ತಂಡ ಇದ್ದಾಗ ದೇವಸ್ಥಾನಗಳು ಸುಸಜ್ಜಿತವಾಗುತ್ತದೆ. ದೇವಸ್ಥಾನದ ಅಭಿವೃದ್ಧಿಗೆ ಸರಕಾರದಿಂದ ಸಿಗುವ ಅನುದಾನವನ್ನು ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಪಲ್ಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ವರ್ಗದ ಜನರು ಒಟ್ಟು ಸೇರಿ ಕೊಂಡು ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಭಜನೆ ನಿರಂತರವಾದಾಗ ಕ್ಷೇತ್ರದ ಸಾನಿಧ್ಯವೂ ಹೆಚ್ಚುತ್ತದೆ ಎಂದು ತಿಳಿಸಿದರು. ಕಾವಳಪಡೂರು ಗ್ರಾ.ಪಂ. ಅಧ್ಯಕ್ಷೆ ರಜನಿ ಬಾಬು ಕುಲಾಲ್, ಪಾಣೆಮಂಗಳೂರು ಸುಮಂಗಲ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಸದಾನಂದ ಮಲ್ಲಿ, ಪ್ರಮುಖರಾದ ಬೂಬ ಸಪಲ್ಯ, ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಎಸ್. ಪಂಡಿತ್, ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ನಾಯ್ಕ್ ಬ್ರಾಂದಿಕೋಡಿ, ಉಪಾಧ್ಯಕ್ಷ ಜಯಪೂಜಾರಿ ಪಿಲಿಂಗಾಲು ಮತ್ತಿತರರು ಉಪಸ್ಥಿತರಿದ್ದರು. ಉತ್ಸವದ ಅಂಗವಾಗಿ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಭಾರ್ಗವ ವಿಜಯ ಶ್ರೀನಿವಾಸ ಕಲ್ಯಾಣ ಯಕ್ಷಗಾನದ ಚೌಕಿ ಪೂಜೆ ನೆರವೇರಿತು. ಸಭಾಕಾರ್ಯಕ್ರಮಕ್ಕೆ ಪೂರ್ವ ಭಾವಿಯಾಗಿ ಡಮರುಗ ಮ್ಯಾಜಿಕಲ್ ಸೌಂಡ್ಸ್‌ನ ಚೈತ್ರ ಕಲ್ಲಡ್ಕ ಬಳಗದವರಿಂದ ಭಕ್ತಿಗಾನ ವೈಭವ ನಡೆಯಿತು.

Related posts

Leave a Reply

Your email address will not be published. Required fields are marked *