Header Ads
Breaking News

ಕಾನೂನು ಗಡಿದಾಟಿದವರಿಗೆ ಪಡುಬಿದ್ರಿ ಪೊಲೀಸರಿಂದ ದಂಡ ಸಹಿತ ಎಚ್ಚರಿಕೆ

ಅನಿರ್ವಾಯ ಹೊರತು ಪಡಿಸಿ ಓಡಾಟ ನಡೆಸಿದರೆ ವಾಹನ ಸೀಜ್ ಎಂಬ ರಾಜ್ಯ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ, ಮುಂಜಾವಿನಿಂದಲೂ ದ್ವಿಚಕ್ರ ಸಹಿತ ಕಾರುಗಳ ಓಡಾಟ ಭರ್ಜರಿಯಾಗಿದ್ದು, ಅಂಥಹ ವಾಹನಗಳನ್ನು ತಡೆದ ಪಡುಬಿದ್ರಿ ಪೊಲೀಸರು ಕೇಸು ಹಾಕಿದಲ್ಲದೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.


ಈ ಬಗ್ಗೆ ಹೆಜಮಾಡಿ ತಪಾಸಣಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲಿಸಿ ಮಾತನಾಡಿದ ಪ್ರಭಾರ ಎಸಿ ಪ್ರತಿಭಾ ಆರ್, ಕೊರೋನಾ ಎರಡನೇ ಅಲೆ ದೇಶವನ್ನೇ ಬೆಚ್ಚಿ ಬೀಳಿಸುವಂತ್ತಿದೆ, ಆ ಕಾರಣದಿಂದ ಸರ್ಕಾರ ಬಹಳಷ್ಟು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಜನ ಕಾನೂನಿಗೆ ಗೌರವ ನೀಡಿ ಸರ್ಕಾರದ ಆದೇಶ ಪಾಲಿಸುವ ಮೂಲಕ ಕೊರೋನಾ ಚೈನ್ ಬ್ರೇಕ್ ಮಾಡ ಬೇಕಾಗಿದೆ. ಅತೀ ಅಗತ್ಯ ಹೊರತು ಪಡಿಸಿ ಯಾವುದೇ ಕಾರಣಕ್ಕೆ ವಾಹನಗಳ ಓಡಾಟಕ್ಕೆ ಮುಂದಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

Related posts

Leave a Reply

Your email address will not be published. Required fields are marked *