Header Ads
Breaking News

ಕಾಪು ಆರೋಗ್ಯ ಕೇಂದ್ರದ ಆವರಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ

ಕಾಪು : ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಹಾಗೂ ತುರ್ತು ಸೇವೆಯ ನಿಮಿತ್ತ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಗುರ್ಮೆ ಫೌಂಡೇಶನ್‍ನ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಇವರ ವತಿಯಿಂದ ಕಾಪು ಮತ್ತು ಉಡುಪಿ ತಾಲೂಕು ವ್ಯಾಪ್ತಿಯ ಕಾಪು, ಶಿರ್ವ, ಪಡುಬಿದ್ರಿ, ಹಿರಿಯಡ್ಕ ಸೇರಿದಂತೆ ನಾಲ್ಕು ಕೇಂದ್ರಗಳಿಗೆ ಕೊರೊನಾ ತುರ್ತು ಸೇವೆಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು. 

ಉಚಿತ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಜಗತ್ತು ತತ್ತರಿಸಿ ಹೋಗಿದೆ. ಕೊರೊನಾ ಸಂಕಷ್ಟದಿಂದ ಜನರ ಜೀವವನ್ನು ರಕ್ಷಿಸಲು ಸರಕಾರ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದು, ಸರಕಾರದ ಪ್ರಯತ್ನಕ್ಕೆ ಪೂರಕವಾಗಿ ನಾವೂ ಕೂಡಾ ಕೈ ಜೋಡಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕೋವಿಡ್ ಸಂಕಷ್ಟವನ್ನು ಎದುರಿಸಲು ಮತ್ತು ರೋಗಿಗಳಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ಅಗತ್ಯವಾಗಿ ಬೇಕಿದ್ದ ನಾಲ್ಕು ಆಂಬುಲೆನ್ಸ್‍ಗಳನ್ನು ಪುತ್ತಿಗೆ ಮಠ ಮತ್ತು ಗುರ್ಮೆ ಫೌಂಡೇಷನ್ ಜೊತೆಗೂಡಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಗುರ್ಮೆ ಫೌಂಡೇಶನ್‍ನ ಪ್ರವರ್ತಕ ಗುರ್ಮೆ ಸುರೇಶ್ ಶೆಟ್ಟಿ ಪ್ರಸ್ತಾವನೆಗೈದು ಮಾತನಾಡಿದರುಕೊರೊನಾ ಸಂಕಷ್ಟದ ನಡುವೆಯೇ ನನ್ನ ಆತ್ಮೀಯಾಗಿದ್ದ ನೂರಾರು ಮಂದಿಯನ್ನು ನಾವು ಕಳೆದು ಕೊಂಡಿದ್ದು ಕಳೆದ ವಾರವಷ್ಟೇ ಆಂಬುಲೆನ್ಸ್ ಸಿಗದೇ ಪರಿಚಿತರಿಬ್ಬರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಆಂಬುಲೆನ್ಸ್ ಕೊರತೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ತತ್‍ಕ್ಷಣ ಕಾರ್ಯಪ್ರವೃತ್ತನಾಗಿ ಪುತ್ತಿಗೆ ಶ್ರೀಗಳ ಸಹಕಾರದೊಂದಿಗೆ ಪುತ್ತಿಗೆ ಮಠ ಮತ್ತು ಗುರ್ಮೆ ಫೌಂಡೇಷನ್‍ನ ವತಿಯಿಂದ ಜಂಟಿಯಾಗಿ 4 ಆಂಬುಲೆನ್ಸ್‍ಗಳನ್ನು ಜನರ ಸೇವೆಗಾಗಿ ಉಚಿತವಾಗಿ ಒದಗಿಸಲು ಯೋಜನೆ ರೂಪಿಸಿದ್ದೇವೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾದಿ ಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ದಕ್ಷಿಣ ಕನ್ನಡ ಮತ್ತು ಉಡುಪಿ ಮೀನುಗಾರಿಕಾ ಫೆಡರೇಷನ್‍ನ ಅಧ್ಯಕ್ಷ ಯಶ್‍ಪಾಲ್ ಸುವರ್ಣ,ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *