Header Ads
Breaking News

ಕಾರ್ಕಳದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಸುಮಾರು ಮೂರುವರೆ ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣದ ಗುದ್ದಲಿ ಪೂಜೆಯನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಧಾರ್ಮಿಕ ವಿಧಿವಿಧಾನದ ಮೂಲಕ ನೆರವೇರಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಮಾತನಾಡಿ ನಮ್ಮ ಕಾರ್ಕಳ ತಾಲೂಕಿನಲ್ಲಿ ಹಲವು ಮಂದಿ ಮಂದಿ ಉತ್ತಮ ಕ್ರೀಡಾಪಟುಗಳು ಗಳಿದ್ದು ರಾಜ್ಯ, ದೇಶ, ಅಂತರಾಷ್ಟ್ರೀಯದಲ್ಲಿ ಹೆಸರನ್ನು ಹಾಗೂ ಪದಕಗಳನ್ನು ಗಳಿಸಿದ್ದಾರೆ. ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗಳಿಸುವ ಕನಸು ಸದ್ಯದಲ್ಲೇ ನನಸಾಗುವ ಸಮಯ ಬಂದಿದೆ ಎಂದ್ರು. ನಂತರ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಎರಡು ವರ್ಷಗಳ ಹಿಂದೆ ಖೇಲೋ ಇಂಡಿಯಾ ಯೋಜನೆ ಅಡಿ ಈ ಕ್ರೀಡಾಂಗಣ ಮಂಜೂರಾಗಿದೆ. ಆ ದಿನದ ಸಚಿವರಾದ ಅನಂತ್ ಕುಮಾರ್ ರವರ ಪರಿಶ್ರಮದಿಂದ ಈ ಕ್ರೀಡಾಂಗಣ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದ್ರು
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಉದಯ ಶೆಟ್ಟಿ, ರೇಷ್ಮಾ  ಉದಯ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆಸೌಭಾಗ್ಯ ಮಡಿವಾಳ, ಪುರಸಭೆ ಅಧ್ಯಕ್ಷ ಸುಮಾ ಕೇಶವ್, ಮಹೇಶ್ ಶೆಟ್ಟಿ, ಪುರಸಭೆ ಅಧಿಕಾರಿ ರೇಖಾ ಜೆ. ಶೆಟ್ಟಿ ಸಹಾಯಕ ಯೋಜನಾ ಸೇವಾ ಸೇವಾ ಕ್ರೀಡಾಧಿಕಾರಿ ನಿತೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *