Header Ads
Breaking News

ಕಾರ್ಕಳದಲ್ಲಿ ನಿನ್ನೆ ಸುರಿದ ಮಳೆಯಿಂದ ಹಾನಿ

ಕಾರ್ಕಳದಲ್ಲಿ ನಿನ್ನೆ ಸಂಜೆ ಗಾಳಿ ಮಳೆಗೆ ಕಾರ್ಕಳ ಮಧ್ಯ ಪೇಟೆಯಲ್ಲಿ ಭಾರಿ ಹಾನಿ ಉಂಟಾಗಿದೆ. ಮುಖ್ಯರಸ್ತೆಯ ವಿಜ್ಞೇಶ್ ಟವರ್‍ನ ಮೇಲಿನ ಚಾವಣಿ ಅಲ್ಲಿ ಸಮೀಪವಿರುವ ಶಾಲಿನಿ ಟವರ್ ಮೇಲೆ ಹಾರಿ ಸುಮಾರು 500 ಮೀಟರ್ ದೂರದಲ್ಲಿರುವ ಡಾ. ಜೋಶಿ ಅವರ ಕ್ಲಿನಿಕ್ ಕಟ್ಟಡಕ್ಕೆ ಅಪ್ಪಳಿಸಿ ಕಟ್ಟಡದ ಸೀಟು ಅದರೊಂದಿಗೆ ಇದ್ದ ಲೈಟ್ ಎಲ್ಲವೂ ಹಾರಿ ಹೋಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಂಧಿ ಮೈದಾನ ರಸ್ತೆಯ ಅಂಚೆ ಕಚೇರಿ ಹಿಂಭಾಗದ ಗ್ರೇಸಿ ಪಿರೇರಾ ಅವರ ಮನೆಯ ಮೇಲ್ಚಾವಣಿ ಗಾಳಿಯಿಂದ ಕೆಳಗೆ ಬಿದ್ದು ವಿನ್ಸ್ ಎಂಬವರ ಹೊಸ ಕಾರು ಸಂಪೂರ್ಣ ಜಖಂಗೊಂಡಿದೆ.

ಹಲವಾರು ಕಡೆ ವಿದ್ಯುತ್ ಕಂಬಗಳು ಹಾಗು ತೆಂಗಿನ ಮರಗಳು ನೆಲಕ್ಕುರುಳಿವೆ. ಕಾರ್ಕಳದಲ್ಲಿಕರ್ಪ್ಯೂ ಇದ್ದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಜನಸಂಚಾರ ಇರಲಿಲ್ಲ. ಮಾಹಿತಿ ತಿಳಿದು ತಾಲೂಕು ದಂಡಾಧಿಕಾರಿ ಪುರಂದರ ಹೆಗಡೆ ಕಂದಾಯ ಅಧಿಕಾರಿಗಳು ವಿದ್ಯುತ್ ಇಲಾಖೆಯ ಅಧಿಕಾರಿಗಳು ಅಗ್ನಿಶಾಮಕದಳದವರು ಪೊಲೀಸ್ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

Leave a Reply

Your email address will not be published. Required fields are marked *