Header Ads
Breaking News

ಕಾರ್ಕಳದಲ್ಲಿ ಲಾಕ್‍ಡೌನ್‍ಗೆ ಸಹಕರಿಸಿದ ಜನತೆ

ಕಾರ್ಕಳ ನಗರದಲ್ಲಿ ಬೆಳಿಗ್ಗೆ ಜನ ಕಂಡುಬಂದಿದ್ದರೆ ಬೆಳಗ್ಗೆ ಹತ್ತು ಗಂಟೆಯ ಬಳಿಕ ಸಂಪೂರ್ಣ ಬಂದಾಗಿತ್ತು. ಪೊಲೀಸರು ಕಟ್ಟುನಿಟ್ಟಿನ ಕ್ರಮದಿಂದಾಗಿ ನಗರದಲ್ಲಿ 10 ಗಂಟೆ ತನಕ ಖರೀದಿಗಾಗಿ ಓಡಾಟ ನಡೆದಿತ್ತು. ತಾಲೂಕು ಆಡಳಿತ ನಿಯಮವನ್ನು ಕಠಿಣ ಗೊಳಿಸಿದೆ. ಅನಗತ್ಯ ತಿರುಗಾಡುವ ಅವರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ . ಕಾರ್ಕಳ ತಾಲೂಕಿನ ನಾಲ್ಕು ಸ್ಥಳಗಳಲ್ಲಿ ಚೆಕ್ಪೋಸ್ಟ್ ಹಾಕಿದ್ದು ಅನಗತ್ಯ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಲಾಗಿತ್ತು. ನಿಯಮದ ನೆಪವೊಡ್ಡಿ ಅಗತ್ಯ ಸೇವೆಗಳಿಗೆ ಅವಕಾಶ ನೀಡಿಲ್ಲ ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.

 

Related posts

Leave a Reply

Your email address will not be published. Required fields are marked *