Header Ads
Breaking News

ಉಪ್ಪಳದಲ್ಲಿ ತಯಾರಾಗುತ್ತಿರುವ ಮದರಂಗಿಗೆ ಬಹು ಬೇಡಿಕೆ

ಮಂಜೇಶ್ವರ: ಮೆಹಂದಿ ಪ್ರಿಯರ ನಾಡು ಉಪ್ಪಳ ಅದರಲ್ಲೂ ಹನಫಿ ವಿಭಾಗದಲ್ಲಿರುವ ಮುಸಲ್ಮಾನರಲ್ಲಿ ಮೆಹಂದಿ ಹೆಚ್ಚಿನ ಪ್ರಸಕ್ತಿಯನ್ನು ಪಡೆದಿದೆ. ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ತಯಾರಾಗುತ್ತಿರುವ ಮದರಂಗಿಗೆ ಎಲ್ಲಿಲ್ಲದ ಬೇಡಿಕೆ. ರಂಜಾನ್ ತಿಂಗಳಿನ ಕೊನೆಯ ವಾರದೊಂದಿಗೆ ವಿವಿಧ ರೀತಿಯ ಮದರಂಗಿಗಳು ಉಪ್ಪಳ ಹನಫಿ ವಿಭಾಗದ ಮನೆಗಳಲ್ಲಿ ತಯಾರಾಗುತ್ತದೆ. ಹಲವರು ಸ್ವಂತ ಉಪಯೋಗಕ್ಕೆ ಖರೀದಿಸಿದರೆ ಇನ್ನು ಕೆಲವರು ಮಾರುಕಟ್ಟೆಗೆ ತಲುಪಿಸಲು ಕೊಂಡೊಯ್ಯುತ್ತಿದ್ದಾರೆ.

ಪುಟಾಣಿಗಳಿಂದ ಹಿಡಿದು ಎಲ್ಲಾ ವಯೋಮಾನದ ಸ್ತ್ರೀಯರಿಗೂ ಮೆಹಂದಿ ಎಂದರೆ ಪಂಚಪ್ರಾಣ. ಇಲ್ಲಿಯ ವಿಶೇಷತೆಯಂದರೆ ಮೆಹಂದಿ ಹಚ್ಚಲು ಮಾತ್ರವಲ್ಲ ವಿವಿಧ ರೀತಿಯ ಮೆಹಂದಿ ಹಾಗೂ ಅದರ ತಯಾರಿ ಉದ್ಯಮ ಕೂಡಾ ಕಳೆದ ಎರಡು ದಶಕಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಉಪ್ಪಳ ಜೀನತ್ ಮೆಹಂದಿ, ಹಿಬಾ ಮೆಹಂದಿ, ಕೇರಳದ ಕಣ್ಣೂರು , ಕಲ್ಲಿಕೋಟೆ , ಅದೇ ರೀತಿ ಕರ್ನಾಟಕದ ಮಂಗಳೂರು, ಉಡುಪಿ, ಕುಂದಾಪುರ ಸರಿದಂತೆ ಇತರ ರಾಜ್ಯಗಳ ವಿವಿಧೆಡೆಗಳಿಂದ ಭಾರಿ ಬೇಡಿಕೆಯಿದೆ.

ಇದೀಗ ಈದ್ ಹಬ್ಬ ಹತ್ತಿರವಾಗುತ್ತಿದ್ದಂತೆಯೇ ಉಪ್ಪಳದಲ್ಲಿ ಮನೆಗಳನ್ನು ಕೇಂದ್ರೀಕರಿಸಿ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಮೆಹಂದಿ ತಯಾರಿ ಹಾಗೂ ಡಿಸೈನಿಂಗ್ ಮಾಡಿ ಕೊಡಲಾಗುತ್ತಿದೆ. ಕಳೆದ ವರ್ಷ ಕೂಡಾ ಕೋವಿಡ್ ಮಹಾಮಾರಿ ಅಪ್ಪಳಿಸಿದ ಹಿನ್ನೆಲೆಯಲ್ಲಿ ಮೆಹಂದಿಗೆ ಬೇಡಿಕೆ ಕಮ್ಮಿಯಾಗಿತ್ತು. ಈ ಸಲ ಕೂಡಾ ಕೋವಿಡ್ ಹರಡುವಿಕೆ ಹೆಚ್ಚಲಾಗಿರುವ ಹಿನ್ನೆಲೆಯಲ್ಲಿ ಬೇಡಿಕೆ ಕಮ್ಮಿಯಾಗಿರುವುದಾಗಿ ಮೆಹಂದಿ ತಯಾರಕರು ಹೇಳುತ್ತಿದ್ದಾರೆ. ಕೇವಲ ರಂಜಾನ್ ತಿಂಗಳಿನಲ್ಲಿ ಮಾತ್ರವಲ್ಲ. ಮಾಡುವೆ ಹಾಗೂ ಇತರ ಶುಭ ಸಮಾರಂಭಗಳಲ್ಲೂ ಉಪ್ಪಳದಲ್ಲಿ ತಯಾರಾಗುತ್ತಿರುವ ಮೆಹಂದಿಗೆ ಭಾರಿ ಬೇಡಿಕೆ ಇದೆ. ಇಂದು ಮೆಹಂದಿ ಹಚ್ಚಡ ಸಮಾರಂಭ ವಿರಳವೆಂದೇ ಹೇಳಬಹುದು. ಎಲ್ಲಾ ಧರ್ಮಾದವರಲ್ಲೂ ಮೆಹಂದಿಗೆ ಹೆಚ್ಚಿನ ಬೇಡಿಕೆ ಇದೆ .

Related posts

Leave a Reply

Your email address will not be published. Required fields are marked *