Header Ads
Breaking News

ಕಿರು ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಅಗೆತ : ನಳ್ಳಿ ನೀರಿನ ಸಂಪರ್ಕ ಕಡಿತ

ಕಾರ್ಕಳದ ಕುಕ್ಕುಂದೂರು ಗ್ರಾಮಪಂಚಾಯತ್ ವ್ಯಾಪ್ತಿಯ ಒಂಟಿ ಚಾರು ಪದವು ಎಂಬಲ್ಲಿ ಇದ್ದ ಏಕೈಕ ಸಂಪರ್ಕ ರಸ್ತೆಯನ್ನು ಸುಮಾರು ಎಂಟು ದಿನಗಳ ಹಿಂದೆ ಶಾಸಕರ ಅನುದಾನದಿಂದ ನಿರ್ಮಾಣವಾಗುವ ಕಿರುಸೇತುವೆಗಾಗಿ ರಸ್ತೆಯನ್ನು ಅಗೆದು ಹಾಕಿದ್ದಾರೆ. ಇದರಿಂದಾಗಿ ರಸ್ತೆಯ ಆಚೆ ಬದಿಯಲ್ಲಿರುವ ಸುಮಾರು 50 ಮನೆಗಳಿಗೆ ಎಲ್ಲಿಗೆ ಹೋಗದ ಸ್ಥಿತಿ ಉಂಟಾಗಿದೆ.

ಅದಲ್ಲದೆ ಅವರ ಮನೆಗಳಿಗೆ ಹೋಗುವ ನಳ್ಳಿ ನೀರಿನ ಸಂಪರ್ಕವನ್ನು ಕಡಿದು ಹಾಕಲಾಗಿದೆ. ಈಗ ಕೊರೋನಾ ಮಹಾಮಾರಿಯ ಅಟ್ಟಹಾಸದಲ್ಲಿ ಯಾರಿಗೆ ಏನು ಆಗುತ್ತದೆ ಹೇಳಲು ಸಾಧ್ಯವಿಲ್ಲ. ಈಗಾಗಲೇ ಮಳೆಗಾಲ ಪ್ರಾರಂಭಗೊಂಡಿದೆ. ಈ ಸಮಯದಲ್ಲಿ ಗುತ್ತಿಗೆದಾರರು ಕಾಂಕ್ರೀಟ್ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತದೆ. ಇಲ್ಲಿ ವ್ಯವಸ್ಥಿತವಾದ ಮೋಸ ನಡೆದಿದೆ. ಈ ರಸ್ತೆಯನ್ನು ಆದಷ್ಟು ಬೇಗ ಸಂಬಂಧಪಟ್ಟವರು ಸರಿಪಡಿಸಬೇಕು. ಎಂದು ಸಾಮಾಜಿಕ ಕಾರ್ಯಕರ್ತ ಬಿಪಿನ್ ಚಂದ್ರಪಾಲ್ ವಿ4 ಮಾಧ್ಯಮದೊಂದಿಗೆ ಹೇಳಿದರು.

Related posts

Leave a Reply

Your email address will not be published. Required fields are marked *