Header Ads
Breaking News

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳಿಗೆ ಪಡುಮಲೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ

ಪಡುಮಲೆ ಕೋಟಿ ಚೆನ್ನಯ್ಯ ಜನ್ಮ ಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್, ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಎಡನೀರು ಮಠ ಕಾಸರಗೋಡು ಮಠಕ್ಕೆ ತೆರಳಿ ಪಡುಮಲೆ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಫಲಪುಷ್ಪಗಳೊಂದಿಗೆ ನೀಡಿ ಬ್ರಹ್ಮ ಕಲಶೋತ್ಸವಕ್ಕೆ ಆಮಂತ್ರಿಸಿದರು. ಪಡುಮಲೆ ಕೋಟಿ ಚೆನ್ನಯ್ಯ ಟ್ರಸ್ಟ್ ನ ಅಧ್ಯಕ್ಷರು , ರಾಜ್ಯ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಇವರನ್ನು ಸ್ವಾಮೀಜಿಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದಂತಹ ವಿಜಯ್ ಕುಮಾರ್ ಸೊರಕೆಯವರು ಮತ್ತು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಧರ ಪಟ್ಲರವರು, ಕೋಟಿ ಚೆನ್ನಯ್ಯ ಜನ್ಮಸ್ಥಾನ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ವೇದನಾಥ ಸುವರ್ಣರು ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ ರೈ ಕೆದಂಬಾಡಿ ಗುತ್ತು ಹಾಗೂ ಟ್ರಸ್ಟ್ ನ ಸಂಚಾಲಕರಾದ ರತನ್ ನಾಯಕ್ ಕರ್ನೂರು ಗುತ್ತು ಮತ್ತು ಸದಸ್ಯರಾದ ನವೀನ್ ಕುಮಾರ್ ರೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *