Header Ads
Breaking News

ಕೊರೋನಾ ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಯುತ್ತಿದೆ : ಡಿಸಿ ಜಗದೀಶ್

ಕುಂದಾಪುರ : ದೇಶಾದ್ಯಾಂತ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಾಕಷ್ಟು ಸಿದ್ದತೆಗಳು ನಡೆಯುತ್ತಿದ್ದು, ನಿರ್ಮಿತಿ ಕೇಂದ್ರದ ಮೂಲಕ 25 ಐಸಿಯು ಬೆಡ್‍ಗಳನ್ನು ಹೊಂದಿರುವ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಕುಂದಾಪುರ ಉಪ ವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೋವಿಡ್ ಆಸ್ಪತ್ರೆಗೆ ಕುಂದಾಪುರದ ರೆಡ್‍ಕ್ರಾಸ್ ಘಟಕದ ವತಿಯಿಂದ ನೀಡಲಾದ ಐದು ಆಕ್ಸಿಜನ್ ಕಾನ್ಸನ್ ಟ್ರೇಟರ್ ಸ್ವೀಕರಿಸಿ ಅವರು ಮಾತನಾಡಿದರು. 3ನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎನ್ನುವ ಅನುಭವಿಗಳ ಅಭಿಪ್ರಾಯದ ಕುರಿತಾದ ವರದಿಗಳ ಆಧಾರದ ಮೇಲೆ ಜಿಲ್ಲೆಯ ನಿರ್ಮಿತಿ ಸಂಸ್ಥೆಯ ಲಾಭಾಂಶ ಹಣದಲ್ಲಿ ಉಡುಪಿಯಲ್ಲಿ 15 ಹಾಗೂ ಕುಂದಾಪುರದಲ್ಲಿ 10 ಐಸಿಯು ಹಾಸಿಗೆಗಳನ್ನು ಹೊಂದಿರುವ ಪರಿಪೂರ್ಣ ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದೆ. ದೇಶದ ವಿವಿಧೆಡೆ ಆಕ್ಸಿಜನ್ ಕೊರತೆಯ ವರದಿಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ದಾನಿಗಳು ಆಕ್ಸಿಜನ್ ಕಾನ್ಸನ್ ಟ್ರೇಟರ್ ನೀಡುವ ಮೂಲಕ ಜನರ ಜೀವ ರಕ್ಷಣೆಗೆ ನೆರವಾಗುತ್ತಿರುವುದು ಅಭಿನಂದನಾರ್ಹ.

Related posts

Leave a Reply

Your email address will not be published. Required fields are marked *