Header Ads
Breaking News

ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗೀಕರಣ : ಕುತ್ತಾರು ತೇವುದಲ್ಲಿ ರೈತ ಸಂಘದಿಂದ ಪ್ರತಿಭಟನೆ

Protests by Farmers' Union
Protests by Farmers' Union

ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರಕಾರ ಎಪಿಎಂಸಿಯನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಬೆನ್ನೆಲುಬು ರೈತನಿಗೆ ಅನ್ಯಾಯ ಮಾಡುವುದರ ಜೊತೆಗೆ ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗೀಕರಣಗೊಳಿಸಿ ರೈತರನ್ನು ಕಂಗಾಲಾಗಿ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.Protests by Farmers' Union

ಅವರು ಕಿಸಾನ್ ಸಂಯುಕ್ತ ಮೋರ್ಚಾ ದೇಶವ್ಯಾಪಿ ಕರೆ ನೀಡಿರುವ ಕಪ್ಪು ಪಟ್ಟಿ ಪ್ರದರ್ಶನ ಅಂಗವಾಗಿ ಕುತ್ತಾರು ತೇವುಲದಲ್ಲಿ ಹಮ್ಮಿಕೊಂಡ ಕಪ್ಪು ಪಟ್ಟಿ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು. ರೈತರ ಉತ್ಪತ್ತಿಗೆ ಎಪಿಎಂಸಿ ಯಲ್ಲಿ ಸೂಕ್ತ ಬೆಲೆ ದೊರೆಯುತಿತ್ತು. ಇದೀಗ ಅದನ್ನು ಖಾಸಗೀಕರಣಗೊಳಿಸು ಮೂಲಕ ರೈತರನ್ನು ಕಂಗಾಲಾಗಿ ಮಾಡಿದೆ. ಹೋರಾಟ ನಡೆಸಿ ಪಡೆದಂತಹ ಕೃಷಿಭೂಮಿಯನ್ನು ಭೂಸುಧಾರಣೆ ಕಾಯಿದೆ ಜಾರಿಗೆ ತಂದು ಬಂಡವಾಳಶಾಹಿ, ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುವ ವ್ಯವಸ್ಥೆ ಸರಕಾರ ಮಾಡಿದೆ. ಇದೆಲ್ಲವನ್ನು ಮುಂದಿಟ್ಟು 500 ರೈತ ಸಂಘಟನೆಗಳು ದೆಹಲಿಯಲ್ಲಿ ಆರು ತಿಂಗಳಿನಿಂದ ಬಿಸಿಲು-ಮಳೆಯೆನ್ನದೆ ಕುಳಿತು ಪ್ರತಿಭಟನೆ ನಡೆಸುತ್ತಿದೆ. 180 ದಿನಗಳ ಪ್ರತಿಭಟನೆ ಮುಂದುವರಿದರೂ ಕೇಂದ್ರ ಸರಕಾರ ಮಾತ್ರ ಕಿವಿ ಕೇಳಿಸದ ರೀತಿಯಲ್ಲಿ ವರ್ತಿಸಿ ರೈತವಿರೋಧಿ, ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದರು.Protests by Farmers' Union

ಈ ವೇಳೆ ರೈತ ಸಂಘ ಜಿಲ್ಲಾ ನಾಯಕ ಶೇಖರ್ ಕುಂದರ್, ದೆಪ್ಪೆಲಿಮಾರು ತ್ಯಾಂಪನ್ಣ, ಮಹಾಬಲ ದೆಪ್ಪೆಲಿಮಾರ್, ದಾಮೋದರ್ ಡಿ, ಮಾಧವ ಸಾಲಿಯಾನ್, ಅಶೋಕ್, ಜಯಂತ್ ಬಂಗೇರ, ನಾರಾಯಣ ಕಂಪ, ರಾಘವ ಮುಳಿಹಿತ್ಲು, ಶಿವಾನಂದ ಕುಂಡಳಾಯಿ, ವಿದ್ಯಾರ್ಥಿ ನಾಯಕ ಭುವನ್ ಕುಂದರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *