Header Ads
Breaking News

ಕೆಎಂಸಿ ಆಸ್ಪತ್ರೆ ಅತ್ತಾವರ : ಉಚಿತ ಎಲುಬು, ಕೀಲು ಮತ್ತು ಮೂಳೆ ತಪಾಸಣಾ ಶಿಬಿರ

ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಯ ವತಿಯಿಂದ ಇಂದು ಬೆಳಗ್ಗೆ 10ರಿಂದ ಸಂಜೆ 3ರವರೆಗೆ ಉಚಿತ ಎಲುಬು, ಕೀಲು ಮತ್ತು ಮೂಳೆ ತಪಾಸಣಾ ಶಿಬಿರವು ಎಲುಬು ಮತ್ತು ಕೀಲು ರೋಗ ವಿಭಾಗ ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಲಿದೆ.ಈ ಶಿಬಿರದಲ್ಲಿ ಬೆನ್ನು ನೋವು, ಸೊಂಟ ನೋಡು, ಕುತ್ತಿಗೆ ನೋವು, ಸ್ಟೈನ್ ಮತ್ತು ಡಿಸಕ್ಕ ಸಮಸ್ಯೆಗಳು, ಭುಜದ ನೋವು, ಕೈ ಮತ್ತು ಭುಜವನ್ನು ಚಲಿಸಲು ಸಾಧ್ಯವಾಗದಿರುವುದು, ಮೊಣಕಾಲಿನ ನೋವು, ಮಂಡಿ ನೋವು, ವಯಸ್ಸಿಗೆ ಸಂಬಂಧಿಸಿದ ಎಲುಬು ಮತ್ತು ಕೀಲು ಸಮಸ್ಯೆಗಳು, ಆರ್ಥೈಟಿಸ್ ಅಥವಾ ಸಂಧಿವಾತ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವರರು ಭಾಗವಹಿಸಿಬಹುದು.ಶಿಬಿರದಲ್ಲಿ ಉಚಿತ ವೈದ್ಯರ ಸಮಲೋಚನೆ, ಎಕ್ಸ್ ರೇ, ಸಿ.ಟಿ ಸ್ಕ್ಯಾನ್, ಎಮ್.ಆರ್‍ಐ ಸ್ಕ್ಯಾನ್ ವಿಭಾಗದಲ್ಲಿ ಶೇ 20 ರಿಯಾಯಿತಿ, ಲ್ಯಾಬೋರೇಟರಿ ವಿಭಾಗದಲ್ಲಿ ಶೇ 10 ರಿಯಾಯಿತಿ, ಔಷಧ ವಿಭಾಗದಲ್ಲಿ ಶೇ 10 ರಿಯಾಯಿತಿಯಿದೆ. ಹೆಚ್ಚಿನ ಮಾಹಿತಿಗಾಗಿ 0824-2445858 ಹಾಗೂ 7022078002 ನಂಬರ್‍ನ್ನು ಸಂಪರ್ಕಿಸಬಹುದು.

Related posts

Leave a Reply

Your email address will not be published. Required fields are marked *