Header Ads
Breaking News

ಕೆಮ್ರಾಲ್  ಗ್ರಾಮ ಲೆಕ್ಕಾಧಿಕಾರಿಯಿಂದ ಗ್ರಾಮಸ್ಥರಿಗೆ ಅನ್ಯಾಯದ ಆರೋಪ: ಗ್ರಾಮಕರಣಿಕರ ಕಚೇರಿ ಮುಂಭಾಗದಲ್ಲಿ ಧರಣಿ

 ಪಕ್ಷಿಕರೆ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಗ್ರಾಮ ಲೆಕ್ಕಾಧಿಕಾರಿ ಶಿವನಂದ್ ಅವರು ಗ್ರಾಮಸ್ಥರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ಹಾಗೂ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕೆಮ್ರಾಲ್ ಗ್ರಾಮಕರಣಿಕರ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಸುರೇಶ್ ಪಂಜ ಮಾತನಾಡಿ, ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನ ಕಸಿಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಪ್ರಮಾಣ ಪತ್ರದಲ್ಲಿ ಆದಾಯವನ್ನು ಹೆಚ್ಚುವರಿಯಾಗಿ ಆಗುತ್ತಿದ್ದಾರೆ.

ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಮನವರಿಕೆ ಮಾಡಿದಾಗ ಅವರು ಉಡಾಫೆಯ ಉತ್ತರ ಕೊಡುತ್ತಾರೆ ಎಂದು ಅವರು ದೂರಿದರು. ಇದೇ ವೇಳೆ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಸದಸ್ಯರು ಕೂಡ ಗ್ರಾಮ ಲೆಕ್ಕಾಧಿಕಾರಿ ಅವರ ಅನ್ಯಾಯವನ್ನು ಖಂಡಿಸಿದರು.

ಈ ವೇಳೆ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಸದಸ್ಯರಾದ ಕಿರಣ್ ಕುಮಾರ್, ಆಶ್ವಿನಿ ಆಳ್ವಾ, ರೇವತಿ , ರಝಕ್, ನವೀನ್ ಪಂಜ, ಕೇಶವ ಪೂಜಾರಿ, ರಾಜೇಶ್ ಶೆಟ್ಟಿ ,ಪೂರ್ಣಿಮಾ , ಮಯ್ಯದ್ದಿ, , ಶಶಿಸುರೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *