Header Ads
Breaking News

ಕೇರಳ ರಾಜ್ಯದಲ್ಲಿ ಇಂದಿನಿಂದ 9 ದಿನಗಳ ಕಾಲ ಲಾಕ್‍ಡೌನ್

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಇಂದಿನಿಂದ 9 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಜನರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನ್ನು ಪಾಲಿಸುವ ದೃಶ್ಯ ಆರಂಭದ ಗಂಟೆಗಳಲ್ಲಿ ಕಂಡುಬರುತ್ತಿದೆ. ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಕಂಡು ಬರುತ್ತಿದ್ದು, ಪೆÇಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರ ಇಲ್ಲದೆ ಸಂಚರಿಸಿದ್ದಲ್ಲಿ ವಾಹನ ಜಪ್ತಿ ಅಥವಾ ದಂಡ ವಸೂಲಿ ಮಾಡಲಾಗುತ್ತಿದೆ. ಪೊಲೀಸ್ ಪಾಸ್ ಹೊಂದಿದವರಿಗೆ ಮಾತ್ರ ಇನ್ನು ಮುಂದೆ ಸಂಚಾರಕ್ಕೆ ಅನುಮತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ಸಂಚರಿಸಲು ಪ್ರಮಾಣ ಪತ್ರ ಹೊಂದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಇಂದು ಎಂದಿನಂತೆ ವಾಹನ ಓಡಾಟವನು ಕಂಡು ಬಂತು. ಇನ್ನು ಪೊಲೀಸರು ಕೆಲವರಿಗೆ ಅವರದೇ ಅದ ಶೈಲಿಯಲ್ಲಿ ಬುದ್ದಿ ಹೇಳಿದರು. ಅನಾವಶ್ಯಕ ಓಡಾಟ ಮಾಡಿದವರ ಮೇಲೆ ಕೇಸ್ ಬುಕ್ ಮಾಡಿದರು ಮತ್ತು ವಾಹನ ವನ್ನು ಸೀಜ್ ಮಾಡಲಾಯಿತು. ಕಾಸರಗೋಡು ಎಸ್ ಪಿ ಮಧ್ಯಮದೊಂದಿಗೆ ಮಾತನಾಡಿ 75 ಬ್ಲಾಕ್ಲ್ಯಿಂಗ್ ಪಾಯಿಂಟ್ 48 ಬೈಕ್ ಪೆಟ್ರೋಲ್ ಪಾಯಿಂಟ್ 51 ಮೊಬೈಲ್ ಪೆಟ್ರೋಲ್ ಪಾಯಿಂಟ್ ವತಿಯಿಂದ ಮುಂಜಾನೆಯಿಂದಲೇ ಜನರ ಜಾಗೃತಿಗಾಗಿ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಅಂತರ್ ರಾಜ್ಯ ಪ್ರವೇಶವನ್ನು ರದ್ದು ಮಾಡಲಾಗಿದೆ. ಅಂತರ್ ರಾಜ್ಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ರಿಪೊರ್ಟ್ ಇದ್ದರೆ ಮಾತ್ರ ಪ್ರವೇಶವೆಂದು ಹಿರಿಯ ಆಯುಕ್ತರು ತಿಳಿಸಿದ್ದಾರೆ. ಸಾಮಾನ್ಯ ಜನರಿಗೆ ಯಾವುದೆ ರೀತಿಯ ತೊಂದರೆ ಆಗುವುದಿಲ್ಲ ದಿನಸಿ ಅಂಗಡಿ ಹಾಲು ಹಣ್ಣು ತರಕಾರಿ ಅಂಗಡಿಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು. ಅಗತ್ಯ ಸಂಚಾರ ಮಾಡುವರು ಪಾಸ್ ತೆಗೆದು ಸಂಚಾರಿಸಬೇಕು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *